ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಭೀಕರ ಅಪಘಾತ ನಡೆದಿದೆ. ಕಾರೊಂದು ನಿಂತಿದ್ದ ಕಂಟೈನರ್ ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ ಘಟನೆ ಿಂದು ಬೆಳಗಿನಜಾವ ನಡೆದಿದೆ.
ಮೃತ ಯುವಕರು ಬೆಂಗಳೂರು ಮೂಲದವರೆಂದು ತಿಳಿದುಬಂದದ್ದು, 25ರಿಂದ 3ರ ವಯೋಮಾನದವರಾಗಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದರು.ಮೃತರನ್ನು ಅಭಿಷೇಕ್, ಮಂಜುನಾಥ್, ವಿಕ್ರಂ, ಚೇತನ್ ಎಂದು ಗುರುತಿಸಲಾಗಿದೆ. ಮೃತಪಟ್ಟ ಪೈಕಿ ಚೇತನ್ ಅಬಕಾರಿ ಇನ್ಸ್ ಪೆಕ್ಟರ್ ಹುದ್ದೆಗೆ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು ಎಂದು ತಿಳಿದು ಬಂದಿದೆ.
ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಶವಗಳ ಮರಣೋತ್ತರ ಪರೀಕ್ಷೆಗಾಗಿ ಚನ್ನರಾಯಪಟ್ಟಣಕ್ಕೆ ತಂದಿದ್ದಾರೆ.