ಚಿಕ್ಕಮಗಳೂರು: ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ತಿರ ಬರುತ್ತಿದೆ. ರೈತ ವಿರೋಧಿ ಸರ್ಕಾರ ಎಂಬುದಕ್ಕೆ ದೆಹಲಿ ದೌರ್ಜನ್ಯವೇ ಸಾಕ್ಷಿ. ರೈತರ ಕೋಪ-ಶಾಪ-ತಾಪ ಎಲ್ಲವೂ ಇವರಿಗೆ ತಗುಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ದೆಹಲಿ ಪ್ರತಿಭಟನೆ ನಡೆಸಿದವರು ರೈತರಲ್ಲ, ಭಯೋತ್ಪದಕರು: ಸಚಿವ ಬಿ.ಸಿ. ಪಾಟೀಲ್
ಸುದ್ದಿಗಾರರೊಂದಿಗೆ ಮಾತನಾಡಿ ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಬೆಂಝ್ ಹಾಗೂ ದೊಡ್ಡ ಕಾರುಗಳು ಮಾತ್ರ ಓಡಾಡಬೇಕಾ ? ಟ್ರ್ಯಾಕ್ಟರ್ ಓಡಾಡಬಾರದೇ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ರೈತರಿಲ್ಲದೆ ಬೆಂಗಳೂರಿಗರು ಊಟ ಮಾಡುತ್ತಾರಾ ? ರೈತರ ಮಕ್ಕಳೆಂದು ಶಾಲು ಹಾಕಿಕೊಂಡು ಸರ್ಕಾರ ಮಾಡುವವರು, ಅವರನ್ನ ಬೆಂಗಳೂರಿನೊಳಗೆ ಬರಲು ಏಕೆ ಬಿಡುತ್ತಿಲ್ಲ. ಸರ್ಕಾರದ ವೈಫಲ್ಯವನ್ನು ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



