ಬೆಳಗಾವಿ: ಬೇರೆಯವರ ಹೆಸರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದಿದ್ದ 6 ನಕಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ 6 ನಕಲಿ ವಿದ್ಯಾರ್ಥಿಗಳು ಮೊದಲ ದಿನವೇ ಸಿಕ್ಕಿ ಬಿದ್ದಿದ್ದಾರೆ. ಹಾಲ್ ಟಿಕೆಟ್ ಪರಿಶೀಲನೆ ವೇಳೆ ಎಕ್ಸಾಂಗೆ ಹಾಜರಾಗಿರುವುದು ನಕಲಿ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಎಕ್ಸ್ ಟ್ರನಲ್ಸ್ ಪರಿಕ್ಸಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದರು.ರಾಹುಲ್ ಕಿಳ್ಳಿಕೇತರ, ಭಿಮಶಿ ಹುಲಿಕುಂದ, ಕಾರ್ತಿಕ್ ಲಚ್ಚಪ್ಪ ಜಿಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವಿತಾ ಮಾದೇವ ಹೊಸೂರು ಬಂಧಿತರು. ಚಿಕ್ಕೋಡಿ ಪೊಲೀಸರು ನಕಲಿ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ.



