ದಾವಣಗೆರೆ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿ ನೋಂದಣಿಗೆ ಕನ್ನಡ ಸಾಹಿತ್ಯ ಪರಿಷತ್ ಅವಕಾಶ ನೀಡಲಾಗಿದೆ.
ಜ. 6, 7 ಮತ್ತು 8 ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವವರು ಹೆಸರು ನೋಂದಣಿ ಮತ್ತು ಸಮ್ಮೇಳನದ ಮಾಹಿತಿಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ಎಂಬ ಹೊಸ ಆ್ಯಪ್ ಸಿದ್ಧಪಡಿಸಿದೆ.
ಆ್ಯಪ್ ನ ಮುಖಪುಟದಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ. ಸಹಾಯವಾಣಿ, ಹಾವೇರಿ, ಗೋಷ್ಠಿಗಳ ವಿವರ ಒಳಗೊಂಡಿದೆ. ನೋಂದಣಿ ಡಿ. 1ರಿಂದ ಡಿ. 18ರ ವರೆಗೆ ನಡೆಯಲಿದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ 500 ರೂ. ಗಳನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕು.