ಡಿವಿಜಿ ಸುದ್ದಿ,ಜಗಳೂರು : ನಗರದ ಹೊರ ವಲಯದ ರಸ್ತೆಯ ಪಕ್ಕದಲ್ಲಿ ಶವವೊಂದು ಪತ್ತೆಯಾಗಿರುವ ಘಟನೆ ಬಿದರಿಕರೆ ರಸ್ತೆಯಲ್ಲಿ ಜರುಗಿದೆ.
ಬಸವರಾಜ್ (45) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ಜಗಳೂರು ಪಟ್ಟಣದ ಅಶ್ವಥ್ ರೆಡ್ಡಿ ನಗರದ ನಿವಾಸಿಯಾಗಿದ್ದಾರೆ. ಬಸವರಾಜ್ ಎಗ್ ರೈಸ್ ನಡೆಸುತ್ತಿದ್ದನು ಎನ್ನಲಾಗಿದ್ದು, ಈತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



