ಢಾಕಾ: ಬಾಂಗ್ಲಾದೇಶದ ಬಹು ಸಂಖ್ಯಾತ ಮುಸ್ಲಿಂ ಸಮುದಾಯ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಘಟನೆ ನಡೆದಿದೆ.ಬಾಂಗ್ಲಾದೇಶದ ಕ್ಯುಮಿಲ್ಲಾ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಫೇಸ್ಬುಕ್‍ನಲ್ಲಿ ಪೋಸ್ಟ್ ವಿಚಾರವಾಗಿ ಈ ಕೃತ್ಯ ನಡೆದಿರುವ ವರದಿಯಾಗಿದೆ.
ಪ್ಯಾರಿಸ್ ನಲ್ಲಿ ಶಿಕ್ಷಕನ ಶಿರಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಶ್ಲಾಘಿಸಿದ್ದು,ಿದರಿಂ ಬಾಂಗ್ಲಾದೇಶಿ ಮುಸ್ಲಿಂ ಸಮುದಾಯ ಹಿಂದೂಗಳ ಮನೆ ಮೇಲೆ ದಾಳಿ ನಡೆಸಿದೆ.
ಭಾನುವಾರ ಕ್ಯುಮಿಲ್ಲಾದ ಮುರಾದ್ ನಗರದ ಬಳಿ ಘಟನೆ ನಡೆದಿದೆ. ಬಾಂಗ್ರಾ ಬಜಾರ್ ಪೊಲೀಸ್ ಠಾಣೆಯ ಒಸಿ ಕಮ್ರುಜ್ಮಾನ್ ತಾಲೂಕ್ ದಾರ್ ಈ ಕುರಿತು ಮಾಹಿತಿ ನೀಡಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಶಿಶುವಿಹಾರ ಶಾಲೆಯ ಮುಖ್ಯ ಶಿಕ್ಷಕ ಪ್ಯುರ್ಬು ಧೌರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮ್ಯಾಕ್ರಾನ್‍ನ ಕ್ರಮವನ್ನು ಮುಖ್ಯ ಶಿಕ್ಷಕ ಸ್ವಾಗತಿಸಿದ್ದಕ್ಕೆ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ. ಕ್ಯುಮಿಲ್ಲಾ ಡಿಸಿ ಎಂಡಿ ಅಬುಲ್ ಫಜಲ್ ಮಿರ್ ಹಾಗೂ ಎಸ್‍ಪಿ ಸೈಯದ್ ನೂರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಿರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಂಡಿ ಅಬುಲ್ ಫಜಲ್ ಮಿರ್, ಸ್ಥಳೀಯರು ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಬಂಧನವಾದ ಇಬ್ಬರು ಸಹ ಈ ಕೃತ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ.
ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಘಟನೆಯ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರನ್ನು ಗುರುತಿಸಲಾಗುವುದು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗುತ್ತಿದ್ದು, ಕರ್ಬನ್‍ಪುರ ಹಾಗೂ ಆಂಡಿಕೋಟ್ ಗ್ರಾಮಗಳಲ್ಲಿ ನಾಲ್ಕು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಡಿಜಿಟಲ್ ಸೆಕ್ಯೂರಿಟಿ ಕಾಯ್ದೆಯಡಿ ಮುಖ್ಯ ಶಿಕ್ಷಕ ಹಾಗೂ ಇತರರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.



