ನವದೆಹಲಿ : ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಘಝ್ವಾ ಏ ಹಿಂದ್ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಅಖ್ತರ್, ಮೊದಲು ಕಾಶ್ಮೀರವನ್ನು ವಶಪಡಿಸ್ತೇವೆ. ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಸಮಾ ಟಿವಿಗೆ ಸಂದರ್ಶನ ನೀಡಿದ ಅಖ್ತರ್, ಶಮಲ್ ಮಶ್ರಿಕ್ (ಅರೇಬಿಯನ್ ಪೆನಿನ್ಸುಲಾದಿಂದ ಉತ್ತರಕ್ಕೆ ಇರುವ ಪ್ರದೇಶವಾಗಿದ್ದು, ಉರ್ದು ಭಾಷೆಯಲ್ಲಿರುವ ಉಲ್ಲೇಖವಾಗಿದೆ) ನಿಂದ ಸಶಕ್ತ ಸೇನೆ ಉದಯಿಸಲಿದೆ. ಉಜ್ಬೇಕಿಸ್ತಾನ್ನಿಂದಲೂ ವಿವಿಧ ಶಕ್ತಿಗಳು ನಮ್ಮೊಡನೆ ಕೈ ಜೋಡಿಸಲಿವೆ. ಇವೆಲ್ಲವೂ ಖೊರಾಸಾನ್ ಅನ್ನು ಉಲ್ಲೇಖಿಸುತ್ತಿದ್ದು, ಐತಿಹಾಸಿಕ ಪ್ರದೇಶ ಲಾಹೋರ್ ತನಕ ವಿಸ್ತರಿಸಲ್ಪಡಲಿದೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಅಟಾಕ್ ತನಕ ತಲುಪಲಿದ್ದು, ಅಟಾಕ್ನಲ್ಲಿರುವ ನದಿಯಲ್ಲಿ ಎರಡು ಬಾರಿ ರಕ್ತ ಪ್ರವಾಹವೇ ಹರಿಯಲಿದೆ. ಘಝ್ವಾ ಏ ಹಿಂದ್ ನಡೆಯಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆದಿದೆ.
ಘಝ್ವಾ-ಏ-ಹಿಂದ್ ಪದವನ್ನು ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳೂ ಬಳಸುತ್ತಿವೆ. ಈ ಪರಿಕಲ್ಪನೆಯ ಪ್ರಕಾರ, ಸಿರಿಯಾದಿಂದ ಈ ಯುದ್ಧ ಆರಂಭವಾಗಿ ಕಪ್ಪು ಬಾವುಟ ಹಿಡಿದ ಶಕ್ತಿ ಭಾರತವನ್ನು ಅತಿಕ್ರಮಿಸಲಿದೆ. ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಉದ್ದೇಶದ ಈ ಯುದ್ಧಕ್ಕೆ ಪೂರಕವಾಗಿ ಆಗ ಹಿಂದು ಮತ್ತು ಮುಸಲ್ಮಾನರ ನಡುವೆ ಭೀಕರ ಹೊಡೆದಾಟ ನಡೆಯಲಿದೆ. ಇದರಲ್ಲಿ ಮುಸ್ಲಿಮರಿಗೆ ಭಾರತದಲ್ಲಿರುವ ಹಿಂದುಗಳ ವಿರುದ್ಧ ನಿರ್ಣಾಯಕ ಗೆಲುವು ಸಿಗಲಿದೆ. ಭಾರತದಲ್ಲಿ ಉಗ್ರಕೃತ್ಯಗಳಿಗೆ ಉಗ್ರರನ್ನು ನಿಯೋಜಿಸುವಾಗ ಜೈಷ್ ಏ ಮೊಹಮ್ಮದ್ (ಜೆಇಎಂ) ನಿರಂತರವಾಗಿ ಇದನ್ನೇ ಬೋಧಿಸಿ, ಅವರನ್ನು ಪ್ರಚೋದಿಸುತ್ತಿದೆ ಎಂದಿದ್ದಾರೆ .
ಅಖ್ತರ್ಗೆ ಈ ಹೇಳಿಕೆಗೆ ವ್ಯಾಪಕ ವಿವಾದ ಸೃಷ್ಟಿಸಿದೆ. ಪರ – ವಿರೋಧದ ಟೀಕೆಗಳು ವ್ಯಕ್ತವಾಗಿವೆ. ಘಝ್ವಾ ಏ ಹಿಂದ್ ಅಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದು ಅರ್ಥ ಬರುತ್ತದೆ.



