ಡಿವಿಜಿ ಸುದ್ದಿ,ನ್ಯಾಮತಿ: ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬರಲಿ ಎಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಬಂಜಾರ ಸಮಾಜದ ಮುಖಂಡರುಗಳು ಶ್ರೀಕ್ಷೇತ್ರ ಸೂರಗೊಂಡನಕೊಪ್ಪದ ಶ್ರೀ ಸಂತಸೇವಲಾಲ್ ಹಾಗೂ ಮರಿಯಮ್ಮ ದೇವಸ್ಥಾನದ ಆವರಣದಲ್ಲಿ ಹೋಮ ನಡೆಸಿದರು.
ಈ ವೇಳೆ ತಾಂಡ ನಿಗಮದ ನಿರ್ದೇಶಕ ಮಾರುತಿನಾಯ್ಕ್ ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕಿಗೆ ಧೃಡಪಟ್ಟಿದ್ದು, ಅವರು ಬೆಂಗಳೂರಿನಲ್ಲಿ ಸೋಂಕು ನಿವಾರಣೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಪವಿತ್ರ ಕ್ಷೇತ್ರ ಸಂತ ಸೇವಾಲಾಲ್ ದೇವಾಲಯದಲ್ಲಿ ಮಹಾಭೋಗ್ (ಹೋಮ ಹವನ) ನಡೆಸಿದ್ದೇವೆ ಎಂದರು.
ಶಾಸಕರು ಅವಳಿ ತಾಲೂಕಿನಲ್ಲಿ ಕೊರೊನಾ ಜಾಗೃತಿ ಮೂಡಿಸಿದ್ದಲ್ಲದೆ, ಬಡವರಿಗೆ ಪ್ರತಿದಿನ ಊಟ,ಆಹಾರ ಸಾಮಗ್ರಿಗಳನ್ನು ವಿತರಿಸಿ ಬಡವರ ಕಲ್ಯಾಣಕ್ಕೆ ನಿಂತಿದ್ದರು. ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿತರಿಗೆ ನೈತಿಕ ಬಲ ತುಂಬಿ ಎಲ್ಲರು ಗುಣಮುಖರಾಗುವಂತೆ ನೋಡಿಕೊಂಡಿದ್ದಾರೆ, ಅಂಥ ಶಾಸಕರಿಗೆ ಕರೋನಾ ದೃಢಪಟ್ಟಿದ್ದು ಆದಷ್ಟು ಬೇಗ ಅವರು ಗುಣಮುಖರಾಗಿ ಬರುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಈ ಸಂಧರ್ಭ ಅವಳಿ ತಾಲೂಕಿನ ಬಂಜಾರ ಸಮಾಜದ ಅಧ್ಯಕ್ಷ ಜುಂಜ್ಯಾನಾಯ್ಕ್, ಸರ್ಜಾನಾಯ್ಕ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ್, ಚನ್ನೇಶ್‌ನಾಯ್ಕ್ ಹಾಗೂ ಇತರರು ಉಪಸ್ಥತಿತರಿದ್ದರು.