ಕೋಲಾರ : ಜಿಲ್ಲೆಯ ನರಸಾಪೂರ ಹೊಂಡಾ ಮೋಟರ್ ಸೈಕಲ್ & ಸ್ಕೂಟರ ಇಂಡಿಯಾ ಪ್ರೈ.ಲಿಮಿಟೆಡ್ ಅವರು ಫಿಟ್ಟರ, ಇಲೆಕ್ಟ್ರಿಷಿಯನ್, ವೆಲ್ಡರ, ಟರ್ನರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಸೇರಿದಂತೆ ಮುಂತಾದ ಟ್ರೇಡ್ಗಳಲ್ಲಿ ಐಟಿಐ ಪಾಸಾದ 18 ರಿಂದ 27 ವರ್ಷದೊಳಗಿನ ಪುರುಷ ಅಭ್ಯರ್ಥಿಗಳ ನೇಮಕಾತಿಗೆ ಡಿಸೆಂಬರ 19 ರಂದು ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ನವನಗರದ ಸೆಕ್ಟರ್ ನಂ.48 ರಲ್ಲಿರುವ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಗೆ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆಯ ಅಂಕಪಟ್ಟಿಗಳ ಝರಾಕ್ಸ್ ಪ್ರತಿ, 3 ಸೆಟ್ ಬಯೋಡಾಟಾ, ಆಧಾರ ಕಾರ್ಡ ತಪ್ಪದೇ ತರುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337, 7019254724, 8722914903, 9742739357, 9845637419ಗೆ ಸಂಪರ್ಕಿಸಬಹುದಾಗಿದೆ.