ಡಿವಿಜಿ ಸುದ್ದಿ, ಹೊಸಪೇಟೆ: ಲಾಕ್‌ಡೌನ್ ವಿಶ್ವ ವಿಖ್ಯಾತ ಹಂಪಿಸ್ಮಾರಕಗಳವೀಕ್ಷಣೆಗೆಪ್ರವಾಸಿಗರಹೆಚ್ಚಿದೆ. ಆದ್ರೆ, ಭಾರತೀಯಪುರಾತತ್ವಇಲಾಖೆಕೊರೊನಾಆತಂಕದಹಿನ್ನೆಲೆಯಲ್ಲಿದಿನಕ್ಕೆ 2000 ಟಿಕೆಟ್ ಮಾತ್ರನೀಡುತ್ತಿದೆ. ಹೀಗಾಗಿ 2 ಸಾವಿರ ಟಿಕೆಟ್ ನಂತರ ಬಂದವರು ವೀಕ್ಷಣೆಯಿಂದ ವಂಚಿತರಾಗುತ್ತಿದ್ದಾರೆ.
ಇಲಾಖೆ ದಿನಕ್ಕೆ 2000 ಟಿಕೆಟ್ ಮಾತ್ರ ನೀಡುತ್ತಿದ್ದು, 2 ಸಾವಿರ ಟಿಕೆಟ್ ಬಳಿಕ ಸಾಫ್ಟವೇರ್ ತನ್ನಿಂದ ತಾನೇ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಹಂಪಿಗೆ ಆಗಮಿಸುವ ಪ್ರವಾಸಿಗರು ಪ್ರಮುಖ ಸ್ಮಾರಕಗಳ ದರ್ಶನವಿಲ್ಲದೇ ಮರಳುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಪ್ರವಾಸಿ ತಾಣ ವೀಕ್ಷಣೆಗೆ ಅವಕಾಶ ನೀಡಿವೆ. ಆದ್ರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ನಿತ್ಯ 2000 ಟಿಕೆಟ್ ಮಾತ್ರ ನೀಡುತ್ತಿದೆ.
ಇನ್ನು ಹಂಪಿಯ ಪ್ರಮುಖ ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ದೊರೆಯದೇ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ. ಭಾರತೀಯ ಪುರಾತತ್ವ ಇಲಾಖೆ ನಿಯಮದಲ್ಲಿ ಸಡಿಲಿಕೆ ಮಾಡಿಲ್ಲ.