ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗಮ್ಮ ದೇವಿಗೆ ಹರಕೆ ತೀರಿಸಲು ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಹರಕೆ ತೀರಿಸಲು ಮೆಟ್ಟಿಲು ಹತ್ತಿ ಇಳಿಯುವಾಗ ಈ ಘಟನೆ ನಡೆದಿದೆ. ದಾವಣಗೆರೆ ನಗರದ ಹುಚ್ಚಪ್ಪ (60) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ನಿನ್ನೆ (ಅ.20) ಸೀಗೆ ಹುಣ್ಣಿಮೆ ಹಿನ್ನೆಲೆ ದೇವಸ್ಥಾನಕ್ಕೆ ಬಂದಿದ್ದರು. ಮೆಟ್ಟಿಲು ಇಳಿಯುವಾಗ ತೀವ್ರ ಸುಸ್ತಾಗಿ ಕುಳಿತರು. ತಕ್ಷಣ ದೇವಸ್ಥಾನ ಸಿಬ್ಬಂದಿ ನೀರು ಕೊಟ್ಟರು. ಆದರೆ, ತೀವ್ರವಾಗಿ ಬಳಲಿದ್ದರಿಂದ ಕುಳಿತ ತಕ್ಷಣವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹುಚ್ಚಪ್ಪ ಹೃದಯ ಸಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.