ಹರಪನಹಳ್ಳಿ: ತಾಲೂಕಿನ ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದದ ಅಧ್ಯಕ್ಷರಾಗಿ ಎಂ. ಹುಸೇನ್ ಸಾಬ್ ಹಾಗೂ ಉಪಾಧ್ಯಕ್ಷರಾಗಿ ಜಿ ಬಸವನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸತೀಶ ನಾಯ್ಕ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜೀ ಅಧ್ಯಕ್ಷರಾದ ಡಾ.ಎಂ.ಸುರೇಶ್, ಶಾಂತಕುಮಾರ ಹಾಗೂ ನಿರ್ದೇಶಕರಾದ ಜಿ.ಎ.ವೆಂಕಟೇಶ ಶೆಟ್ಟಿ, ವಾಸಣ್ಣ, ಎ.ಬಿ.ಬಸವನಗೌಡ, ಪೂಜಾರ ಪ್ರಕಾಶ್, ಮರಿಯಪ್ಪ, ಮಹಾದೇವಮ್ಮ, ಎನ್.ಸಾವಿತ್ರಮ್ಮ ಕಾರ್ಯದರ್ಶಿ ಎಂ.ಸೀನಪ್ಪ ಮತ್ತು ಮುಖಂಡರಾದ ಐ.ಸಲಾಂ ಸಾಬ್ ಮತ್ತು ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.