ಹರಪನಹಳ್ಳಿ: ಎದುರಿಗೆ ಬಂದ ವಾಹನ ಸವಾರರಿಗೆ ದಾರಿ ಕೊಡಲು ಸೈಡ್ ತೆಗೆದುಕೊಂಡ ಪರಿಣಾಮ ಕೆರೆ ಏರಿಯಿಂದ ಸಾರಿಗೆ ಇಲಾಖೆ ಬಸ್ ಜಾರಿದ್ದು, ಕೂಡಲೇ ಚಾಲಕ ಬಸ್ ನಿಲ್ಲಿಸಿ ಕೂಡಲೇ 40 ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ. ಚಾಲಕ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಸಿದ ಘಟನೆ ತಾಲ್ಲೂಕಿನ ಅಲಮರೆಸಿಕೇರೆಯಲ್ಲಿ ಇಂದು (ಸೆ.26) ಬೆಳಗ್ಗೆ ನಡೆದಿದೆ.
ಕಲ್ಯಾಣ ಕರ್ನಾಟಕ ಸಾರಿಯ ಹರಪನಹಳ್ಳಿ ಘಟಕ ಬಸ್ ಇದಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಿದ್ದರು. ಅಲಮರಸಿಕೇರೆ ಮಾರ್ಗದಕೆರೆ ಏರಿಯ ತಿರುವಿನಲ್ಲಿ ಎದುರಿಗೆ ವಾಹನಗಳು ಬಂದಿದ್ದರಿಂದ ಚಾಲಕ ಬಲಭಾಗಕ್ಕೆ ಬಸ್ ಸೈಡ್ ತೆಗೆದುಕೊಂಡಿದ್ದಾನೆ. ನಿಯಂತ್ರಣ ತಪ್ಪಿದ ಬಸ್ ಕೆರೆ ಏರಿಯಿಂದ ಕೆಳಗೆ ಜಾರಿದೆ. ತಕ್ಷಣ ಚಾಲಕಬಸ್ ನಿಲ್ಲಿಸಿ, 40 ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ.ಕೆರೆ ಏರಿಗೆ ಡಾಂಬರು ರಸ್ತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಬರೀ ರಸ್ತೆ ಮಾಡಿ ತಡೆಗೋಡೆ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.



