ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಶ್ರೀ ಉತ್ಸಾವಾಂಬ ದೇವಾಲಯ ಹೊಂದಿದ್ದು, ಗುರುವಾರದ ಅಧಿಕ ಹುಣ್ಣಿಮೆಗೆ ದೇವಿ ದರ್ಶನಕ್ಕೆ ಬರುವ ಭಕ್ತರು ಸಾಧ್ಯತೆ ಇದೆ. ಈ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ತಹಶೀಲ್ದಾರ್ ಡಿ. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ದೇವಿ ದರ್ಶನಕ್ಕೆ ಬರುವ ಭಕ್ತರು ಗುಂಪುಗುಂಪಾಗಿ ಸೇರಿದೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆಯಬೇಕು. ಹಣ್ಣು-ಕಾಯಿಗಳನ್ನು ದೇವಸ್ಥಾನದ ಒಳಗಡೆ ಆಶೀರ್ವಾದ ಮಾತ್ರ ಮಾಡಿಕೊಡಬೇಕು.

ಭಕ್ತರು ತಮ್ಮ ತಮ್ಮ ಮನೆಯಲ್ಲಿ ಕಾಯಿಗಳನ್ನು ಒಡೆದುಕೊಳ್ಳಬೇಕು.ರಾತ್ರಿಯ ವೇಳೆ ಭಕ್ತರೂ ತಂಗಲು ಅವಕಾಶವಿರುವುದಿಲ್ಲ ಎಂದು ಹರಪನಹಳ್ಳಿ ತಹಸೀಲ್ದಾರ್ ಹಾಗೂ ಶ್ರೀ ಉಚ್ಚoಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



