ದಾವಣಗೆರೆ: ಜಿಎಂಐಟಿ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಪ್ರೋ ಕಂಪನಿಯ ಸಂದರ್ಶನ ಆಯೋಜಿಸಿದ್ದು, ಈ ಸಂದರ್ಶನದಲ್ಲಿ 64 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 64 ಜತೆ ಇನ್ನೂ ಹಲವು ವಿದ್ಯಾರ್ಥಿಗಳ ಫಲಿತಾಂಶ ನಿರೀಕ್ಷೆಯಲ್ಲಿದ್ಧಾರೆ.
ಈ ಬಗ್ಗೆ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದು, ಈ ಹಿಂದೆ 27 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ, 11 ವಿದ್ಯಾರ್ಥಿಗಳು ಎಸ್ ಎಲ್ ಕೆ ಕಂಪನಿಗೆ ಹಾಗೂ 5 ವಿದ್ಯಾರ್ಥಿಗಳು ಎಚ್ ಸಿ ಎಲ್ ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಯಾಗಿದ್ದರು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಜಿ ಎಂ ಲಿಂಗರಾಜು, ಆಡಳಿತಾಧಿಕಾರಿ ವೈ ಯು ಸುಭಾಷ್ ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಯನ್ನು ತಿಳಿಸಿದ್ದಾರೆ.



