ಶಿವಮೊಗ್ಗ: ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಲಯ ಆದೇಶದಂತೆ ಫಸಲಿಗೆ ಬಂದಿದ್ದ 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ನೆಲಸಮ ಮಾಡಿದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಪ್ರದೇಶದ ಸ.ನಂ.1ರಲ್ಲಿ ರೈತ ಮಂಜುನಾಥ ಅವರು ಅರಣ್ಯ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಬೆಂಗಳೂರು ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಯದಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯವು ಮಂಜುನಾಥ್ ಅವರ 1.20 ಎಕರೆ ಜಮೀನು ಹೊರತುಪಡಿಸಿ, ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ನೀಡಿತ್ತು.



