ಡಿವಿಜಿ ಸುದ್ದಿ, ಚನ್ನಗಿರಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಯನ್ನು ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಗಿರಿ ರೈತರ ಸಂಘ ಸಮಿತಿ ಸಂಘಟನೆ,ಕಲ್ಲು ಹೊಡೆಯುವ ಹಾಗೂ ಕಟ್ಟಡ ಕಾರ್ಮಿಕರ ಸಂಘ. ಡಾ.ಬಿ.ಆರ್ ಅಂಬೇಡ್ಕರ್ ಭೀಮಾರ್ಮಿ ಹಾಗೂ ವಿವಿಧ ಸಂಘಟನೆಗಳು ಚನ್ನಗಿರಿ ರಸ್ತೆ ತಡೆಗಟ್ಟಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಉದ್ದೇಶಿಸಿ ಶಿವಗಂಗಾ ಬಸವರಾಜ್ ಮಾತನಾಡಿದರು.
ಸರ್ಕಾರ ರೈತರನ್ನು ಕಾಯ್ದೆಗಳ ಮುಖಾಂತರ ಮುಗಿಸಲು ಹೊರಟಿರುವೆ. ಆದ್ದರಿಂದ ಈ ತಕ್ಷಣವೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಮುಂಬರುವ ಹಲವಾರು ತೊಂದರೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರವೇ ನೇರ ಹೊಣೆ ಗಾರಿಕೆ ಎಂದು ಹೇಳಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ಯಲದಲ್ಲಿ ರವಿಕುಮಾರ್, ಭರತ್ ಗೌಡ, ಸೈಯದ್ ಗೌಸ್ ಪೀರ್ ಮಾದಿಗ ಸಮಾಜದ ಅಧ್ಯಕ್ಷ ಮಂಜುನಾಥ್, ನೀತಿಗೆರೆ ಮಂಜಣ್ಣ, ಜಿಲಾನಿ, ನವಾಜ್ ಸೇರಿದಂತೆ ಮತ್ತಿತರರು ಉಪಸ್ಥತಿತರಿದ್ದರು.



