ಬೆಂಗಳೂರು : ದೇಶದಾದ್ಯಂತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿಯೇ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದಂತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಧಾನ ಪರಿಷತ್ ನಲ್ಲಿಯೂ ಅಂಗೀಕಾರವಾಗಿದೆ.
ಈ ಬಾರಿಯ ಚಳಿಗಾಲದ ಅಧಿವೇಶನ ಸೋಮವಾರದಿಂದ ನಡೆಯುತ್ತಿದೆ. ಈ ವೇಳ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ವಿರುದ್ಧ ರೈತರಿಂದ ತೀವ್ರ ವಿರೋಧದ ನಡುವೆಯೇ ರಾಜ್ಯದ ವಿಧಾನ ಪರಿಷತ್ ನಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ಅಂಗೀಕರವಾಗಿದೆ.
ವಿಧಾನ ಪರಿಷತ್ ನಲ್ಲಿ ಮಸೂದೆ ಅಂಗೀಕಾರ ಕುರಿತಂತೆ ಇಂದು ಮತಕ್ಕೆ ಹಾಕಲಾಯಿತು. ಈ ಕಾಯ್ದೆ ಅಂಗೀಕಾರಕ್ಕೆ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. 37 ಮತಗಳು ಕಾಯ್ದೆ ಅಂಗೀಕರದ ಪರವಾಗಿ ಚಲಾವಣೆಗೊಂಡವು. ಕಾಯ್ದೆಯ ವಿರೋಧವಾಗಿ 21 ಮತಗಳ ಚಲಾವಣೆಗೊಂಡವು. ಈ ಮೂಲಕ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲ್ಪಟ್ಟಿದೆ.



