ನವದೆಹಲಿ: ದೇಶದಲ್ಲಿ ವಾಯು ಮಾಲಿನ್ಯ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನ ಉತ್ತೇಜಿಸಲು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದಾರೆ.
ಗೋ ಎಲೆಕ್ಟ್ರಿಕ್ ಕ್ಯಾಂಪೇನ್ ಉದ್ದೇಶಿಸಿ ಮಾತನಾಡಿದ್ರು. ಎಲೆಕ್ಟ್ರಿಕ್ ವಾಹನಗಳನ್ನ ಸರ್ಕಾರಿ ಕಛೇರಿಗಳ ಬಳಕೆಗೆ ಹಾಗೂ ನೌಕರರಿಗೆ ಕಡ್ಡಾಯಗೊಳಿಸಬೇಕು ಎಂದೂ ಇದೇ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ದೆಹಲಿಯಲ್ಲಿ ಬಳಕೆಯಲ್ಲಿರುವ 10 ಸಾವಿರ ಎಲೆಕ್ಟ್ರಿಕ್ ವಾಹನಗಳಿಂದಾಗಿ ಪ್ರತಿ ತಿಂಗಳಿಗೆ 30 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಇದೇ ಸಮಯದಲ್ಲಿ ಹೇಳಿದ್ದಾರೆ.
ಸರ್ಕಾರ ಎಲೆಕ್ಟ್ರಿಕ್ ಅಡುಗೆ ಸಾಧನಗಳ ಖರೀದಿಯಲ್ಲೂ ಸಬ್ಸಿಡಿ ನೀಡುವಂತಾಗಬೇಕು. ಇದರಿಂದ ಎಲ್ಪಿಜಿ ಸಿಲಿಂಡರ್ ಬಳಕೆ ಕಡಿಮೆಯಾಗಲಿದೆ ಎಂದು ಗಡ್ಕರಿ ಸಲಹೆ ನೀಡಿದ್ದಾರೆ. ಎಲೆಕ್ಟ್ರಿಕ್ ಅಡುಗೆ ಸಾಮಗ್ರಿಗಳ ಮೇಲೂ ಸಬ್ಸಿಡಿ ನೀಡಬಾರದು..? ಈಗಾಗಲೇ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುತ್ತಿದ್ದೇವೆ. ಎಲೆಕ್ಟ್ರಿಕ್ ಅಡುಗೆ ಒಲೆಗಳಿಗೂ ಸಬ್ಸಿಡಿ ನೀಡಿದ್ರೆ ಎಲ್ಪಿಜಿ ಬಳಕೆ ಕಡಿಮೆಯಾಗಲಿದೆ ಎಂದು ಹೇಳಿದ್ರು.



