ಬೆಂಗಳೂರು : ಜನವರಿ 1, 2020ರಿಂದ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರಿಷ್ಕೃತ ರೂಪದಲ್ಲಿ ರಾಜ್ಯದಲ್ಲಿ ವಿದ್ಯಾಗಮ ಜಾರಿ ಎಂಬುದಾಗಿ ತಿಳಿಸಿದ್ದರು. ಇದೀಗ ಹೊಸ ರೂಪದಲ್ಲಿ ವಿದ್ಯಾಗಮ ಯೋಜನೆ ಜಾರಿಗೆ ಬರಲಿದೆ.
ಈ ಕುರಿತಂತೆ ಆದೇಶ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಕಲಿಕೆಯ ನಿರಂತರತೆ ದೃಷ್ಟಿಯಿಂದ ಪರಿಷ್ಕೃತ ರೂಪದ ವಿದ್ಯಾಗಮ ಜ.1ರಿಂದ ಜಾರಿಗೆ ಬರಲಿದೆ. ಈ ಸಂಬಂಧ ಸುರಕ್ಷತಾ ಮಾರ್ಗಸೂಚಿ, ಎಸ್‌ಒಪಿಯನ್ನು ಅನುಸರಿಸಿ, ಹೊಸ ರೂಪದಲ್ಲಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ಇಲಾಖೆ ತಿಳಿಸಿದೆ.
ವಿದ್ಯಾಗಮ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಾಗಿತ್ತು ಎಂಬ ಕಾರಣದಿಂದಾಗಿ ತಾಂತ್ರಿಕ ಕಾರಣ ನೀಡಿ, ರಾಜ್ಯ ಸರ್ಕಾರಿ ಆಗಸ್ಟ್ 10ರಂದು ವಿದ್ಯಾಗಮ ಕಾರ್ಯಕ್ರಮ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಜನವರಿ 1, 2021ರಿಂದ ಪುನರಾರಂಭಗೊಳ್ಳಲಿದೆ.



