ಡಿವಿಜಿ ಸುದ್ದಿ, ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದಾಗ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಿಶೋರ್ ಶೆಟ್ಟಿ ಓರ್ವ ಡ್ಯಾನ್ಸರ್ ಆಗಿದ್ದು, ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ನಂತರ ಬಾಲಿವುಡ್ನ ಎಬಿಸಿಡಿ ಸಿನಿಮಾದಲ್ಲಿ ಕಿಶೋರ್ ಶೆಟ್ಟಿ ಅಭಿನಯಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಬಾಲಿವುಡ್ ನ 20ಕ್ಕೂ ಹೆಚ್ಚು ಆರೋಪಿಗಳು ಜೈಲೂಟ ಸವಿಯುತ್ತಿದ್ದಾರೆ. ಇತ್ತ ಚಂದನವನದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾರನ್ನ ಸಿಸಿಬಿ ವಿಚಾರಣೆ ನಡೆಸಿದೆ.
ಇಂದು ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಸಂತೋಷ್ ಮತ್ತು ಮಾಜಿ ಶಾಸಕರ ಪುತ್ರ ಯುವರಾಜ್ ಅನ್ನು ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ ಸಿಸಿಬಿ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇಂದು ಮೂವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.



