ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರಾದ ರಾಗಿಣಿ,ಸಂಜನಾ ಹಾಗೂ ಎ1 ಆರೋಪಿ ಶಿವಪ್ರಕಾಶ್ ಸೇರಿದಂತೆ 5 ಜನರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ಅಭಿಯೋಜಕರ ಮನವಿ ಮೇರೆಗೆ ಕೋರ್ಟ್ ಸೆ. 21ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
33ನೇ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ಮುಂದೂಡಿಕೆ ಮಾಡಿದೆ. ಸರ್ಕಾರದ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರು. ಹೀಗಾಗಿ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ. ನಟಿಯರು ಪರಪ್ಪನ ಅಗ್ರಹಾರದಲ್ಲಿ ಸೋಮವಾರದ ವರೆಗೂ ಕಾಲ ಕಳೆಯಬೇಕಿದೆ.
ಇದಲ್ಲದೆ ಪ್ರಕರಣದಲ್ಲಿ ಕೆಲವರು ಹೊರಗಡೆ ಇದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ಅಭಿಯೋಜನಕರು ಮನವಿ ಮಾಡಿಕೊಂಡರು. ಒಂದು ವೇಳೆ ಈಗ ಬಂಧಿಸಿದ ಆರೋಪಿಗಳಿಗೆ ಜಾಮೀನು ನೀಡಿದರೆ, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ನ್ಯಾಯಧೀಶರ ಮುಂದೆ ಅಭಿಯೋಜಕರು ವಾದ ಮಂಡಿಸಿದರು.



