ಡಿವಿಜಿ ಸುದ್ದಿ, ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟೂರಾದ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ನಿವಾಸದ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ನಡೆದಿದ್ದು, ಅಕ್ರಮ ಹಣ ವರ್ಗಾವಣೆಗೆ ಸಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಎಂಟು ಅಧಿಕಾರಿಗಳನ್ನು ಒಳಗೊಂಡ ತಂಡವು ಮೂರು ಕಾರುಗಳಲ್ಲಿ ಬಂದಿದ್ದು, ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿರುವ ಡಿ.ಕೆ. ಸಹೋದರರ ಮನೆಗೂ ಅಧಿಕಾರಿಗಳ ಮತ್ತೊಂದು ತಂಡ ಪರಿಶೀಲನೆ ನಡೆಯುತ್ತಿದೆ. ಎರಡೂ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
ಮನೆಯ ದಾಖಲೆಗಳ ಬೀರಿವಿನ ಲಾಕರ್ ಓಪನ್ ಮಾಡಲು ಸಿಬಿಐ ಅಧಿಕಾರಿಗಳು ರಾಡ್, ಸುತ್ತಿಗೆ ಉಪಯೋಗಿಸುತ್ತಿದ್ದಾರೆ. ಇನ್ನು ರಾಮನಗರ ಡಿಕೆಶಿ ನಿವಾಸದ ಸುತ್ತಮುತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.