ದಾವಣಗೆರೆ: ತುಮಕೂರು, ದಾವಣಗೆರೆ, ವಿಜಯಪುರ ಸೇರಿದಂತೆ ಒಟ್ಟು 5 ಜಿಲ್ಲಾಧಿಕಾರಿ ಕಚೇರಿಯ (DC Office) ಇ-ಮೇಲ್ ಅಕೌಂಟ್‌ಗೆ ಹುಸಿ ಬಾಂಬ್ ಬೆದರಿಕೆ (Bomb threat) ಸಂದೇಶ ಬಂದಿದೆ.
ಕನಿಷ್ಟ ದಾಖಲೆ ಇದ್ದರೂ ರೈತರ ಮನೆಬಾಗಿಲಿಗೆ ಸರ್ಕಾರದಿಂದ ಪೋಡಿ ದುರಸ್ಥಿ: ಕಂದಾಯ ಸಚಿವ
ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್ ಅಂತಾ ಉಲ್ಲೇಖಿಸಿ, ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್ ಅಕೌಂಟ್‌ಗೆ, ಆರ್ನಾ ಅಶ್ವಿನ್ ಶೇಖರ್ ಎಂಬ ಔಟ್‌ಲುಕ್ ಇ-ಮೇಲ್ ಖಾತೆಯಿಂದ ಬಂದಿರುವ ಸಂದೇಶದಲ್ಲಿ ‘ಪಾಕಿಸ್ತಾನ – ತಮಿಳುನಾಡು DMK-2026 ಚುನಾವಣೆ ಗಮನ ಬೇರೆಡೆ ಸೆಳೆಯಲು ಬಯಸುತ್ತೆ’ಎಂಬ ವಿಷಯದಡಿ, ಹುಸಿ ಬೆದರಿಕೆ ಸಂದೇಶವನ್ನ ರವಾನಿಸಿದ್ದಾರೆ.
ಪರವಾನಗಿ ಭೂ ಮಾಪಕರ ಖಾಯಂ ಅಸಾಧ್ಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಇದಲ್ಲದೆ ಸಂದೇಶದಲ್ಲಿ ತಮಿಳುನಾಡಿನಲ್ಲಿ ಪಾಕಿಸ್ತಾನ ಐಎಸ್‌ಐ ಸೆಲ್, ಮಾಜಿ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, ‘ನಿಮ್ಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 5 ಬಾಂಬ್‌ಗಳಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಸ್ಫೋಟಿಸಲಾಗುವುದು ಎಂದು ಕಳುಹಿಸಲಾಗಿದೆ.
ಮುಂದುವರೆದು, ಇ-ಮೇಲ್ ಬರುತ್ತಿದ್ದಂತೆ, ತಕ್ಷಣ ವಿಚಾರ ದಾವಣಗೆರೆ ಎಸ್ಪಿಗೆ ತಿಳಿಸಿರುವ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು, ಕಚೇರಿಯ 40 ಕ್ಕೂ ಅಧಿಕ ಕೊಠಡಿಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ ತಪಾಸಣೆಯನ್ನ ಮುಂದುವರೆದಿದೆ.



