ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ಗೆ ಇನ್ನೂ ಲಸಿಕೆಯನ್ನೇ ಕಂಡು ಹಿಡಿದಿಲ್ಲ, ಈಗ ಬಿಹಾರದಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಲಸಿಕೆ ಬಂದ ಮೇಲೆ ಅವರಿಗೆ ಉಚಿತವಾಗಿ ಕೊಡಲಾಗುವುದು ಎಂದು ಹೇಳಿರುವ ಬಿಜೆಪಿ ಕೂಸುಟ್ಟುವ ಮೊದಲೇ ಕುಲಾವಿ ಹೊಲೆದಿದೆ ಎಂದು NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್ ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಸಮಯವಿದೆ. ಕನ್ನಡಿಗರಿಗೆ ಅಲ್ಲಿವರೆಗೂ ಕಾಯಬೇಕಾ ..? ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಾಲ ಸೀತಾರಾಮನ್ ಅವರು, ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿ ಮೊದಲು ನೋಡೋಣ…! ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರ ಔದಾರ್ಯ ಮೆಚ್ಚಲೇಬೇಕು.



