ದಾವಣಗೆರೆ: ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ 2 ವರ್ಷದ ಪಿಯುಸಿ ಉಚಿತ ಶಿಕ್ಷಣಕ್ಕಾಗಿ ಏ.13 ರಂದು ಅರ್ಹ ವಿದ್ಯಾರ್ಥಿಗಳಿಗೆ ಲಿಖಿತ ಕ್ವಿಜ್ ನಡೆಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ.ಜಯಂತ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಸಂಸ್ಥೆ ಸ್ಥಾಪಕರಾದ ದಿ. ಎಂ.ಎಸ್ . ಶಿವಣ್ಣನವರ ಗೌರವಾರ್ಥ ಹಾಗೂ ಅವರ ಶಿಕ್ಷಣ ಕ್ಷೇತ್ರದ 60 ವರ್ಷಗಳ ಅವಿಸ್ಮರಣೀಯ ಸೇವೆಗಾಗಿ ಅರ್ಹ 60 ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುವುದು. ಅದರಲ್ಲೂ 30 ಸ್ಥಳೀಯ ವಿದ್ಯಾರ್ಥಿಗಳಿಗೆ 30 ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭ್ಯವಿದೆ ಎಂದರು.
ಎಸ್ ಎಸ್ ಎಲ್ ಸಿ ಗಣಿತ ಹಾಗೂ ವಿಜ್ಞಾನ ವಿಷಯ ಸಂಬಂಧಿಸಿದಂತೆ 60 ಬಹು ಆಯ್ಕೆ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಿ ಬಹುಮಾನ ಗೆಲ್ಲಬಹುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ 15 ಹಾಗೂ ತೃತೀಯ 10 ಸಾವಿರ ನೀಡಲಾಗುವುದು. ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ಬಹುಮಾನ ಜತೆಗೆ ಎಂ.ಎಸ್.ಎಸ್ ಟ್ರೋಫಿ , ನಂತರದ ನೂರು ಮಕ್ಕಳಿಗೆ ಎಂಎಸ್ ಎಸ್ ಮೆಡಲ್ ನೀಡಲಾಗುವುದು ಎಂದರು.
ಸಿದ್ದಗಂಗಾ ಸಂಸ್ಥೆಯಲ್ಲಿ ಏ. 13 ರ ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಎಂ.ಎಸ್.ಎಸ್ ಕ್ವಿಜ್ ನೊಂದಣಿಗಾಗಿ 8073054295 ನಂಬರ್ ಗೆ ಸಂಪರ್ಕಿಸಿ. ಪಿಯುಸಿ ಸೈನ್ಸ್ ಶಿಕ್ಷಣ ಉಚಿತ ನೀಡಲಾಗುವುದು ಅದಕ್ಕಾಗಿ ಎಸ್‌ಎಸ್‌ಎಲ್‌ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು . ಸಿಬಿಎಸ್‌ಇ ವಿದ್ಯಾರ್ಥಿಗಳಾದರೆ ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು. ವಾರ್ಷಿಕ ಆದಾಯ 8 ಲಕ್ಷದೊಳಗಿರಬೇಕು ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ , ಪ್ರೌಢಶಾಲೆಯ ಮುಖ್ಯಶಿಕ್ಷಕಿ ರೇಖಾರಾಣಿ , ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಇದ್ದರು.