ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯ್ತಿಯ 34 ಸ್ಥಾನಗಳಿಗೆ ಮೀಸಲಾತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
- ಪರಿಶಿಷ್ಟ ಜಾತಿಗೆ-8 (ನಾಲ್ಕು ಸ್ಥಾನ ಮಹಿಳೆಯರಿಗೆ)
- ಪರಿಶಿಷ್ಟ ಪಂಗಡ-5 (ಮಹಿಳೆಯರಿಗೆ 3)
- ಹಿಂದುಳಿದ ವರ್ಗ ಎ-3,
- ಹಿಂದುಳಿದ ವರ್ಗ ಬಿ-1
- ಸಾಮಾನ್ಯ ವರ್ಗ -17 (ಮಹಿಳೆ 8)
- ಒಟ್ಟು – 34
ಜಿಲ್ಲಾ ಪಂಚಾಯಿಗಳಿಗೆ ಈಗಾಗಲೇ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ.ಕೊರೊನಾ ಹಿನ್ನೆಲೆ 6 ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಇದೀಗ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ. ಆದರೆ, ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಇನ್ನೂ ನಿರ್ಧರವಾಗಿಲ್ಲ.



