ದಾವಣಗೆರೆ: ಮಾ. 13ರಂದು ಜೀ ಕನ್ನಡ ಖಾಸಗಿ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್- 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ -4 ಶೋ ಮಹಾ ಆಡಿಷನ್ಸ್ ನಗರದ ಎಸ್.ಎಸ್ ಲೇಔಟ್‌ನ ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9ರಿಂದ ಆಡಿಷನ್ ನಡೆಯಲಿದ್ದು, ಆಸಕ್ತರು ಪಾಸ್‌ಪೋರ್ಟ್ ಸೈಜ್ ಭಾವಚಿತ್ರ ಹಾಗೂ ವಿಳಾಸ ದೃಢೀಕರಣದ ನಕಲು ಪ್ರತಿಯೊಂದಿಗೆ ಭಾಗವಹಿಸಬಹುದು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ಕ್ಕೆ 6 ರಿಂದ 60 ವರ್ಷ, ಕಾಮಿಡಿ ಕಿಲಾಡಿ ಶೋಗ 16 ರಿಂದ 60 ವಯಸ್ಸಿನ ಒಳಗಿನವರು ಆಗಿರಬೇಕು. ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ ಎಂದು ಜೀ ಕನ್ನಡ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.