ದಾವಣಗೆರೆ: ಜಮ್ಮು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅರುಣಾ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಕ್ಯಾಂಡಲ್ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಒಂದು ನಿಮಿಷ ಮೌನಾಚರಣೆ ಮಾಡಿ ಮಹಾನಗರ ಪಾಲಿಕೆಯ ವರೆಗೆ ಕ್ಯಾಂಡಲ್ ಲೈಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ಮಹಾನಗರಪಾಲಿಕೆ ಆವರಣದಲ್ಲಿರುವ ಹುತಾತ್ಮ ಯೋಧರ ಪ್ರತಿಮೆ ಬಳಿ ಕ್ಯಾಂಡಲ್ ಬೆಳಗಿಸಿ ಯೋಧರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಹರೀಶ್ ಬಸಾಪುರ, ಸಯ್ಯದ್ ಖಾಲಿದ್, ಮೈನುದ್ದೀನ್, ಮುಜಾಹೀದ್ ಪಾಷಾ, ಶಶಿಧರ್ ಪಾಟೀಲ್, ವಾಜಿದ್, ಓ ಜಿ ಕಿರಣ್, ಐಯಾಜ್ ಅಹಮೆದ್, ಜಫರುಲ್ಲಾ, ನವೀನ ನಲವಡಿ, ಹಬೀಬ, ಮುಬಾರಕ್, ಕ್ವಾಜಾ ಮೊಯಿನುದ್ದೀನ್, ಸಮೀರ್ ಖಾನ್, ಮೆಹಬೂಬ್ ಭಾಷಾ, ಹರೀಶ್ ಬಸಾಪುರ, ಕಿಸಾನ್ ಕಾಂಗ್ರೆಸ್ ಘಟಕದಿಂದ ಸುರೇಶ ಹಾಗೂ ತಿಪ್ಪೇಶ್, ಯುವರಾಜ್ ಮುಂತಾದವರು ಉಪಸ್ಥಿತರಿದ್ದರು



