ದಾವಣಗೆರೆ: ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ದಾವಣಗೆರೆ ಜಿಲ್ಲಾ ನೂತನ ಅಧ್ಯಕ್ಷ ಸ್ಥಾನಕ್ಕೆ ಬಿಗ್ ಫೈಟ್ ಏರ್ಪಟ್ಟಿದ್ದು, ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಕೆಪಿಸಿಸಿ ವಕ್ತಾರ ನಿಖಿಲ್ ಆರ್ ಕೊಂಡಜ್ಜಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಸಾಗರ್ ಎಲ್. ಎಚ್. ಸೈಯ್ದ್ ಖಾಲಿದ್ ಪೈಲ್ವಾನ್ ನಡುವೇ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಆನ್ ಆಲೈನ್ ಮೂಲಕ ಚುನಾವಣೆ ಮುಗಿದಿದೆ. ಕುತೂಹಲಕಾರಿ ಫಲಿತಾಂಶಕ್ಕೆ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಕಾಯುತ್ತಿದ್ದಾರೆ. iyc ಆ್ಯಪ್ ಮುಖಾಂತರವಾಗಿ ಸದಸ್ಯತ್ವ ಅಭಿಯಾನ ನಡೆದಿದ್ದು ಈ ಅಭಿಯಾನದಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ 18,250 ಯುವಕರು ಸದಸ್ಯತ್ವ ಪಡೆದ್ದರು. ಇದರಲ್ಲಿ 13613 ಸದಸ್ಯರು ಮತದಾನಕ್ಕೆ ಅರ್ಹತೆ ಪಡೆದಿದ್ದರು.

ಈಗಾಗಲೇ iyc ಸೆಲ್ಫ್ ವೋಟಿಂಗ್ ಆ್ಯಪ್ ಮುಖಾಂತರ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 7,572 ಮತದಾರರು ಈ ಆ್ಯಪ್ ಮುಖಾಂತರ ಮತ ಚಲಾಯಿಸಿದ್ದರು. ಅಭ್ಯರ್ಥಿಗಳಾಗಿದ್ದ ನಿಖಿಲ್ ಕುಮಾರ್.ಆರ್ ಕೊಂಡಜ್ಜಿ , ಸಾಗರ್ ಎಲ್. ಹೆಚ್.ಹಾಗೂ ಸೈಯದ್ ಖಾಲಿದ್ ಪೈಲ್ವಾನ್ ಈ ಮೂವರು ಅಭ್ಯರ್ಥಿಯಲ್ಲಿ ಯಾರು ಆಗ್ತಾರೆ ಜಿಲ್ಲಾ ಅಧ್ಯಕ್ಷರು ಎಂಬುದನ್ನು ಕಾದು ನೋಡಬೇಕು.
ಜ. 24ರೊಳಗೆ ಫಲಿತಾಂಶ ಬರುವ ಸಾಧ್ಯತೆ ಇದ್ದು, ನಿಖಿಲ್ ಕೊಂಡಜ್ಜಿ, ಸಾಗರ್.ಎಲ್.ಹೆಚ್ ಮಧ್ಯೆ ನೇರ ಪೈಪೋಟಿ ಇದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.



