ದಾವಣಗೆರೆ: ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ದಾವಣಗೆರೆ ಇವರ ವತಿಯಿಂದ ಪ್ರಸ್ತುತ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಜೂ.1 ರಿಂದ ಜೂ.20 ರವರೆಗೆ ದಾವಣಗೆರೆಯ 3 ನೇ ಕ್ರಾಸ್ ಎ ಬ್ಲಾಕ್, ದೇವರಾಜು ಅರಸ್ ಬಡಾವಣೆಯಲ್ಲಿರುವ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಯೋಗ ತರಬೇತಿಯನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಕೇಂದ್ರ ಸರ್ಕಾರದ ಸೂಚಿತ ಯೋಗ ಮಾದರಿ ಚಿಕಿತ್ಸಾ ಶಿಬಿರಕ್ಕೆ ಬರುವ ಪ್ರತಿಯೊಬ್ಬರಿಗೂ 20 ದಿನಗಳ ಕಾಲ ನುರಿತ ಯೋಗ ಶಿಕ್ಷಕರ ಮೂಲಕ ಯೋಗ ಕಲಿಸಲಾಗುವುದು. ಅವರವರ ಆರೋಗ್ಯಕ್ಕೆ ತಕ್ಕಂತೆ ಯೋಗಾಭ್ಯಾಸ, ಪ್ರಾಣಾಯಾಮಗಳನ್ನು ತಿಳಿಸಿಕೊಡಲಾಗುವುದು, ಶಿಬಿರವು ಪ್ರತಿದಿನ ಸಂಜೆ 3.30 ರಿಂದ 4.30 ರವರೆಗೆ ನಡೆಯಲಿದೆ. ಸಾರ್ವಜನಿಕರು ತಪ್ಪದೇ ತಮ್ಮ ತಮ್ಮ ಜಮಖಾನವನ್ನು ತಗೆದುಕೊಂಡು ಬಂದು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸರಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವೈದ್ಯಾಧಿಕಾರಿ (ಯೋಗ ಮತ್ತು ಪ್ರಕೃತಿ ಚಿಕಿತ್ಸಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.