ದಾವಣಗೆರೆ: ಅಂತರ ರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ದಾವಣಗೆರೆ ವಿಶ್ವವಿದ್ಯಾನಿಲಯ ಯೋಗ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಜೂನ್ 21ರಂದು ಬೆಳಿಗ್ಗೆ 7 ಗಂಟೆಗೆಯೋಗ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಶ್ವವಿದ್ಯಾನಿಲಯದ ಜ್ಞಾನಸೌಧ ಆವರಣದಲ್ಲಿ ಏರ್ಪಡಿಸಿರುವ ಯೋಗ ಕಾರ್ಯಕ್ರಮದಲ್ಲಿ ಆದರ್ಶಯೋಗ ಪ್ರತಿಷ್ಠಾನದ ಡಾ.ರಾಘವೇಂದ್ರ ಗುರೂಜಿ ಯೋಗ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡುವರು. ಕುಲಪತಿ ಪ್ರೊ.ಪಿ.ಲಕ್ಷ್ಮಣ ಅಧ್ಯಕ್ಷತೆ ವಹಿಸುವರು. ಕುಲಸಚಿವ ಬಿ.ಬಿ.ಸರೋಜ, ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಪಿ.ಪ್ರಿಯಾಂಕ, ವಿಜ್ಞಾನ ನಿಕಾಯದಡೀನ್ ಪ್ರೊ.ರಾಮಲಿಂಗಪ್ಪ, ಸಿಂಡಿಕೇಟ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಿಭಾಗದ ಸಂಯೋಜನಾಧಿಕಾರಿ ಡಾ.ಶಿವಕುಮಾರ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



