ದಾವಣಗೆರೆ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿದ್ದು, ದಾವಣಗೆರೆಯಲ್ಲಿ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಗರದ ಎಲ್ಲಾ ರಸ್ತೆಗಳು ಖಾಲಿಯಾಗಿದ್ದವು.

ನಗರದ ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಪಿ.ಬಿ ರಸ್ತೆ, ಗಾಂಧಿ ಸರ್ಕಲ್, ಎಪಿಎಂ, ಗುಂಡಿ ಸರ್ಕಲ್ ಸೇರಿದಂತೆ ಎಲ್ಲ ಕಡೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಸಾರ್ವಜಕರು, ವ್ಯಾಪಾರಸ್ಥರು ಕರ್ಫ್ಯೂ ಬೆಂಬಲಿಸಿ ರಸ್ತೆಗೆ ಇಳಿದ ಹಿನ್ನೆಲೆ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಕೆ.ಎಸ್ ಗಿರೀಶ್ ಅವರು ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಬಂದ್ ಮಾಡಿಸಿದರು. ವ್ಯಾಪಾರಕ್ಕೆ ಅವಕಾಶವಿಲ್ಲ. ಸರ್ಕಾರದ ಅದೇಶ ಪಾಲನೆ ಮಾಡಿ ಎಂದು ಸೂಚಿಸಿದರು.

ಅಗತ್ಯ ವಸ್ತುಗಳಾದ ಮೆಡಿಕಲ್ ಸ್ಟೋರ್ ಗಳು, ತರಕಾರಿ, ಹಾಲು ದಿನಸಿ ಅಂಗಡಿ, ಬೇಕರಿ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10ರವರೆಗೆ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಮಯದಲ್ಲಿ ಗ್ರಾಹಕರು ತಮಗೆ ಅಗತ್ಯ ವಸ್ತುಗಳನ್ನು ಖರೀದಿಸಿದ್ರು. 10 ಗಂಟೆಯ ನಂತರ ಮೆಡಿಕಲ್ ಗಳನ್ನು ಬಿಟ್ಟು ಬಾಕಿ ಎಲ್ಲ ಅಂಗಡಿಗಳು ಮುಚ್ಚಿದ್ದವು.

ಲಾರಿ ಸಂಚರಿಸಿಲ್ಲ. ಬಸ್ ಸಂಚಾರಕ್ಕೆ ಅವಕಾಶವಿದ್ದರೂ ಪ್ರಯಾಣಿಕರಿಲ್ಲ. ಕೆಎಸ್ ಆರ್ ಟಿಸಿ ಬಸ್ ಗಳು ಯಥಾ ಪ್ರಕಾರ ಸಂಚರಿಸುತ್ತಿವೆ. ಖಾ ಖಾಲಿಯಾಗಿ ಓಡಾಡುತ್ತಿವೆ. ಇನ್ನು ಖಾಸಗಿ ಬಸ್ ಸಂಚರ ಸ್ಥಗಿತಗೊಳಿಸಿವೆ.



