ದಾವಣಗೆರೆ: ಭಾರತ ಚುನಾವಣಾ ಆಯೋಗದ ಸೆ. 06 ರ ಸೂಚನೆಯಂತೆ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022 ರ ಸಂಬಂಧ ಎಲ್ಲ ಮತದಾರರು, ನಾಗರಿಕರು ಮತದಾರರ ಸಹಾಯವಾಣಿ ಆ್ಯಪ್ (Voter Helpline App) ಡೌನ್‍ಲೋಡ್ ಮಾಡಿಕೊಂಡು ನೋಂದಣಿಯಾಗುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ಮತದಾರರು, ನಾಗರೀಕರು ಮೊಬೈಲ್‍ನಲ್ಲಿ ಪ್ಲೇಸ್ಟೋರ್ Play store / iOS ನಿಂದ ಮತದಾರರ ಸಹಾಯವಾಣಿ ಆಪ್ (VHA) ಡೌನ್‍ಲೋಡ್ ಮಾಡಿಕೊಂಡು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಸೇರ್ಪಡೆ ಮಾಡಿಕೊಳ್ಳಬಹುದು. ಮತದಾರರು ಮೃತರಾಗಿದ್ದಲ್ಲಿ ಅಥವಾ ವರ್ಗಾವಾಗಿದ್ದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಲಿಂಗ, ವಯಸ್ಸು ಇತರೇ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದ. ಹೆಚ್ಚಿನ ತಾಂತ್ರಿಕ ಸಹಾಯಕ್ಕೆ ಜಿಲ್ಲಾ ಮತದಾರ ಸಹಾಯವಾಣಿ 08192-272953 ಗೆ ಕರೆಮಾಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



