ದಾವಣಗೆರೆ: ದೃಶ್ಯಕಲಾ ಮಹಾ ವಿದ್ಯಾಲಯ ಪ್ರವೇಶ ಅವಧಿ ವಿಸ್ತರಣೆದಾವಣಗೆರೆ: ವಿಶ್ವವಿದ್ಯಾ ನಿಲಯ ದೃಶ್ಯಕಲಾ ಮಹಾವಿದ್ಯಾಲ ಯದಲ್ಲಿ ಪಿಯುಸಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಬಿ.ವಿ.ಎ. ಫೌಂಡೇಶನ್ ತರಗತಿಗೆ (1 ಮತ್ತು 2ನೇ ಸೆಮಿಸ್ಟರ್) ಪ್ರವೇಶಕ್ಕೆ ಆಗಸ್ಟ್ 30 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಬಿ.ವಿ.ಎ. ಪದವಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ, ಸ್ನಾತಕೋತ್ತರ (ಪೇಂಟಿಂಗ್/ಅನ್ವಯಿಕ ಕಲೆ) ವಿಭಾಗಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗಳು ಆಗಸ್ಟ್ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448414483, 9986687098 ಸಂಖ್ಯೆಗಳನ್ನು ಸಂಪರ್ಕಿಸಬಹುದು.