ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ಇ-ಚಲನ್ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದು, ಈ ತಿಂಗಳ 19 ದಿನದಲ್ಲಿ 4.5 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಒಬ್ಬ ವ್ಯಕ್ತಿಯಿಂದ ಗರಿಷ್ಠ ಒಟ್ಟು 10 ಪ್ರಕರಣದಿಂದ 5 ಸಾವಿರ ದಂಡ ಕಟ್ಟಿಸಿಕೊಳ್ಳಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿ ವಿಜಯಕುಮಾರ ಎಂ ಸಂತೋಷ್ ಹಾಗೂ ಮಂಜುನಾಥ ಜಿ ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ಸಿಪಿಐ ಟ್ರಾಫಿಕ್ ಶ್ರೀ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಕ್ಯಾಮೆರಾ ಗಳಲ್ಲಿ ಸೆರೆ ಆಗಿ ಇ – ಚಲನ್ ರೈಜ್ ಆಗಿ ದಂಡ ಪಾವತಿಸದೆ ಇರುವ ಪ್ರಕರಣಗಳ ಪೈಕಿ 10 ಮತ್ತು 10 ಕ್ಕಿಂತ ಹೆಚ್ಚು ಇ-ಚಲನ್ ಬಾಕಿ ಇರಿಸಿ ಕೊಂಡಿದ್ದ ವಾಹನ ಮಾಲೀಕ /ಚಾಲಕರನ್ನು ದಕ್ಷಿಣ ಸಂಚಾರ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಒಬ್ಬ ವ್ಯಕ್ತಿಯಿಂದ ಒಟ್ಟು ಬಾಕಿ ಇದ್ದ 10 ಪ್ರಕಾರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ದಕ್ಷಿಣ ಠಾಣೆಯಲ್ಲಿ 5000/- ದಂಡ ಕಟ್ಟಿಸಲಾಯಿತು. ಜ.1ರಿಂದ 19 ರವರೆಗೆ ವಿಶೇಷ ಕಾರ್ಯಚರಣೆ ನಡೆಸಿದ್ದು ಒಟ್ಟು 800 ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ 4.5 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಬಾಕಿ ಉಳಿಸಿಕೊಂಡಿರುವ ವಾಹನ ಚಾಲಕರು ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಮತ್ತು ಹೆಡ್ ಪೋಸ್ಟ್ ಆಫೀಸ್ ದಾವಣಗೆರೆ ಯಲ್ಲಿ ಬಂದು ದಂಡ ಪಾವತಿಸ ಬಹುದಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.



