ದಾವಣಗೆರೆ: ರಾಮಾಯಣದ ಮೂಲಕ ಜಗತ್ತಿಗೆ ಬದುಕಿನ ಮೌಲ್ಯವನ್ನು ತಿಳಿಸಿ ಕೊಟ್ಟ ಆದಿ ಕವಿ ಮಹರ್ಷಿವಾಲ್ಮೀಕಿ ಜಯಂತಿಯನ್ನು ದಾವಣಗೆರೆಯ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರೇಶ ಹನಗವಾಡಿ, ಪ್ರದಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್ ಜಿಲ್ಲಾ ಉಪಾಧ್ಯಕ್ಷ ಶ್ರೀ ನೀವಾಸ್ ದಾಸಕರಿಯಪ್ಪ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ದಕ್ಷಿಣ ಅಧ್ಯಕ್ಷರಾದ ಆನಂದ್ ರಾವ್ ಸಿಂಧೆ, ಕಾರ್ಯಲಯ ಕಾರ್ಯದರ್ಶಿ ಗೌಳಿ ಲಿಂಗರಾಜ್, ಬಿ.ಜೆ.ಪಿ.ಮುಖಂಡ ರಾಜು ಆಳಗೋಡಿ, ಮಹಾನಗರ ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.