ದಾವಣಗೆರೆ: ಶ್ರೀರಾಮನ ಬಗ್ಗೆ ಜಗತ್ತಿಗೆ ತಿಳಿಸಿದ್ದೇ ಮಹರ್ಷಿ ವಾಲ್ಮೀಕಿ. ಹೀಗಾಗಿ ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು ಎಂದು ಸಹಕಾರ ಸಚಿವ ಕೆ.ಎನ್ . ರಾಜಣ್ಣ ಹೇಳಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿ ಅವರು, ಈಗ ಕಟ್ಟಿರುವ ಅಯೋಧ್ಯ ರಾಮ ಮಂದಿರದಲ್ಲೇ ವಾಲ್ಮೀಕಿ ಮಂದಿರ ಕಟ್ಟಲಿ ಎಂದು ಒತ್ತಾಯ ಮಾಡಿದರು. ಯಾರು ನಮ್ಮ ಸಮುದಾಯ ಯೋಗಕ್ಷೇಮ ನೋಡಿಕೊಳ್ತಾರೋ ಅವರ ಪರವಾಗಿ ನಾವು ನಿಲ್ಲಬೇಕು. ನಮ್ಮ ಸಮುದಾಯಕ್ಕೆ ಮೂರು ಜನರನ್ನ ಮಂತ್ರಿ ಮಾಡಿ ಸಮುದಾಯಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಶಿಥಿಲವಾದ 100 ರಾಮನ ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿ. ಮೋದಿ ರಾಮನ ಬದಲು ನೀವು ದಶರಥ ರಾಮನ ದೇವಸ್ಥಾನ ಜೀರ್ಣೋದ್ಧಾರ
ವಾಲ್ಮೀಕಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾವು ಕೂಡ ರಾಮ ಭಕ್ತರೇ. ಆದರೆ ರಹೀಮನನ್ನೂ ಅಷ್ಟೇ ಪ್ರೀತಿಯಿಂದ ನೋಡುತ್ತೇವೆ. ರಾಮನ ಹೆಸರಲ್ಲಿ ರಾಜಕೀಯ ಮಾಡುವುದನ್ನ ಬಿಡಬೇಕು ವಾಗ್ದಾಳಿ ನಡೆಸಿದರು.
ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ವಿವಿ ಆಗಲೇಬೇಕು. ವಾಲ್ಮೀಕಿ ವಿವಿ ಸ್ಥಾಪನೆಗೆ ಈ ಬಾರಿ ಬಜೆಟ್ನಲ್ಲಿ ಘೋಷಿಸಬೇಕು. ಸಿಎಂ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಈ ಕೆಲಸ ಮಾಡಲ್ಲ ಎಂದರು.



