ದಾವಣಗೆರೆ: ನಟ ಸುದೀಪ್ ಇಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ರು. ಸುದೀಪ್ ನೋಡಲು ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ನಟ ಸುದೀಪ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳೂ ಕೂಡ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಪೊಲೀಸರು ನಿಯಂತ್ರಿಸಲು ಎಷ್ಟೇ ಪ್ರಯತ್ನಪಟ್ಟರು. ಅಭಿಮಾನಿಗಳು ಪೊಲೀಸರಿಗೆ ಕ್ಯಾರೇ ಎನ್ನಲ್ಲಿಲ್ಲ. ನೂಕುನುಗ್ಗಲಿನಿಂದ ಸಮಾರಂಭಕ್ಕೆ ಹಾಕಿದ್ದ ಚೇರ್, ಟೇಬಲ್, ಸೋಫಾ ಸೆಟ್, ಬ್ಯಾರಿಕೇಡ್, ಎಲ್ ಇಡಿ ಟಿವಿ ಸೇರಿದಂತೆ ಎಲ್ಲವು ಪೀಸ್ ಪೀಸ್ ಆದವು.
ಅಭಿಮಾನಿ ನಿಯಂತ್ರಿಸಲು ಸ್ವತಃ ಕಿಚ್ಚ ಸುದೀಪ್ ಮುಂದಾದರು. ಕೊನೆಗೆ ನೂನುನುಗ್ಗಲು ಮಧ್ಯೆಯೇ ವಾಲ್ಮೀಕಿ ರತ್ನ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ ಒಂದು ಲಕ್ಷ ನಗದು ಬಹುಮಾನವನ್ನೊಳಗೊಂಡಿದೆ. ಪ್ರಶಸ್ತಿ ನೀಡಿದಕ್ಕೆ ಸ್ವಾಮೀಜಿಗೆ ಧನ್ಯವಾದ ಹೇಳಿದರು. ಹೊಸ ಸಿನಿಮಾ ಹಾಡಿನ ಸಾಲುಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದರು.