ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 9ನೇ ವಾರ್ಷಿಕ ಘಟಿಕೋತ್ಸವವು ಜನವರಿ ತಿಂಗಳಲ್ಲಿ ಜರುಗಲಿದ್ದು, ವಿವಿಧ ಅವಧಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಂತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರ ಪ್ರದಾನ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾರ್ಚ್/ಏಪ್ರಿಲ್-2021, ಜುಲೈ-2021, ಆಗಷ್ಟ್-2021, ಸೆಪ್ಟೆಂಬರ್/ಅಕ್ಟೋಬರ್-2021 ರಲ್ಲಿ ನಡೆದ ವಿವಿಧ ಸ್ನಾತಕ/ಬಿ.ವಿ.ಎ/ಬಿ.ಇಡಿ/ ಸ್ನಾತಕೋತ್ತರ/ಪಿಹೆಚ್.ಡಿ/ಎಂ.ಫಿಲ್, ಪದವಿಗಳ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪದವಿ/ರ್ಯಾಂಕ್/ಚಿನ್ನದ ಪದಕ/ಪ್ರಮಾಣ ಪತ್ರಗಳನ್ನು ಈ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು. ಈ ಅವಧಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ ಈಗಾಗಲೇ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಮಾತ್ರ ಭರ್ತಿ ಮಾಡಬೇಕಾಗಿರುತ್ತದೆ.
ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರದ ಅರ್ಜಿಗಳನ್ನು ಆನ್‍ಲೈನ್ ಮೂಲಕ ಜ. 10 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ವಿಶ್ವವಿದ್ಯಾನಿಲಯದ ವೆಬ್‍ಸೈಟ್ ವಿಳಾಸ www.davangereuniversity.ac.in ನಲ್ಲಿ Examination ಮೆನುವಿಗೆ ಹೋಗಿ DU Portal ನಲ್ಲಿ Convocation Portal ನ ಮೂಲಕ ಅರ್ಜಿಯನ್ನು ಭರ್ತಿ ಮಾಡಿ. ಈ ಅರ್ಜಿಯನ್ನು ಅಪ್‍ಲೋಡ್ ಮಾಡುವ ಬಗ್ಗೆ ಸೂಚನಾ ವಿವರಗಳನ್ನು ವೆಬ್‍ಸೈಟ್‍ನ ಲಿಂಕ್‍ನಲ್ಲಿಯೇ ನೀಡಲಾಗಿದೆ.ಪಿಹೆಚ್.ಡಿ/ಎಂ.ಫಿಲ್ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ನೇರವಾಗಿ ಆನ್‍ಲೈನ್ ನಲ್ಲಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.davangereuniversity.ac.in ನಲ್ಲಿ ನೀಡಲಾಗಿರುವ ನೋಂದಣಿ ಸಂಖ್ಯೆಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.
ಶುಲ್ಕ ವಿವರ : ಸ್ನಾತಕ ಪದವಿ ಮಾರ್ಚ್/ಏಪ್ರಿಲ್ 2021 ಹಾಗೂ ಸೆಪ್ಟೆಂಬರ್/ಅಕ್ಟೋಬರ್ 2021 ರಂದು ಪೂರ್ಣಗೊಳಿಸಿದ. ಬಿ.ಇಡಿ ಪದವಿ ಜುಲೈ-2021ರಲ್ಲಿ ಪೂರ್ಣಗೊಳಿಸಿದ, ಹಾಗೂ ಬಿಪಿ.ಇಡಿ ಪದವಿ ಅಕ್ಟೋಬರ್-2021 ಪೂರ್ಣಗೊಳಿಸಿದ ಸಾಮಾನ್ಯ ವರ್ಗದ ಹಾಗೂ ಎನ್.ಆರ್.ಎಸ್. ಅಭ್ಯರ್ಥಿಗಳಿಗೆ 800 ರೂ. ಪ.ಜಾತಿ/ಪ.ಪಂಗಡ/ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 650 ರೂ. ನಿಗದಿಪಡಿಸಲಾಗಿದೆ.
ಸ್ನಾತಕೋತ್ತರ ಪದವಿ ಅಕ್ಟೋಬರ್-2021 ಪೂರ್ಣಗೊಳಿಸಿದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 1232 ರೂ., ಪ.ಜಾತಿ/ಪ.ಪಂಗಡ/ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 770 ರೂ., ಹಾಗೂ ಎನ್.ಆರ್.ಎಸ್ ಅಭ್ಯಥಿಗಳಿಗೆ 1232 ರೂ. ನಿಗಧಿಪಡಿಸಲಾಗಿದೆ. ಪಿಹೆಚ್.ಡಿ/ಎಂ.ಫಿಲ್ 2021-22ನೇ ಸಾಲಿನಲ್ಲಿ ಪೂರ್ಣಗೊಳಿಸಿದ ಸಾಮಾನ್ಯ ವರ್ಗದ ಹಾಗೂ ಎನ್.ಆರ್.ಎಸ್ ಅಭ್ಯಥಿಗಳಿಗೆ ಅಭ್ಯರ್ಥಿಗಳಿಗೆ 2320 ರೂ., ಪ.ಜಾತಿ/ಪ.ಪಂಗಡ/ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 2035 ರೂ. ನಿಗದಿಪಡಿಸಲಾಗಿದೆ.
9ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯುವ ನಿಗದಿತ ದಿನ, ಸಮಯ ಮತ್ತು ಸ್ಥಳವನ್ನು ವಿಶ್ವವಿದ್ಯಾನಿಲಯದ ಅಂತರ್ಜಾಲ ತಾಣ /ಪತ್ರಿಕೆ/ಮಾಧ್ಯಮಗಳಲ್ಲಿ/ಎಲ್ಲಾ ಕಾಲೇಜು/ಸ್ನಾತಕೋತ್ತರ ಕೇಂದ್ರ/ಘಟಕ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಶುಲ್ಕವನ್ನು ಎಟಿಎಂ ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್‍ನಲ್ಲಿ ನೇರವಾಗಿ ಪಾವತಿಸಬಹುದಾಗಿದೆ. ಕಾಲೇಜಿನಿಂದ ಕಳುಹಿಸಿದ ವಿದ್ಯಾರ್ಥಿಗಳ ಹೆಸರು (ಇಂಗ್ಲೀಷ್ ಮತ್ತು ಕನ್ನಡ), ಪದವಿ ಮುಂತಾದ ಮಾಹಿತಿಯನ್ನು ಯಥಾವತ್ತಾಗಿ ಪದವಿ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿರುತ್ತದೆ. ಇಲ್ಲದಿದ್ದಲ್ಲಿ ತಿದ್ದುಪಡಿಗೆ ರೂ.550/-ಗಳ ದಂಡಶುಲ್ಕವನ್ನು ವಿಧಿಸಲಾಗುವುದು. ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಜ. 15 ರ ಒಳಗೆ ಅಂಚೆ ವಿಳಾಸ ಮೊಬೈಲ್ ನಂಬರ್ ಇತ್ಯಾದಿ ವಿವರವನ್ನು ತುರ್ತಾಗಿ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗಕ್ಕೆ ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿ ಎನ್‍ಸಿಎಲ್ ರದ್ದುಪಡಿಸಿಕೊಂಡ ನಂತರ ಜ. 06 ರೊಳಗೆ ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಕೊನೆ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅಂತಿಮ ಸೆಮಿಸ್ಟರ್ ಅಂಕಪಟ್ಟಿಯಲ್ಲಿ ವಿದ್ಯಾರ್ಥಿ ಹೆಸರುಗಳಲ್ಲಿ ಏನಾದರೂ ತಿದ್ದುಪಡಿ ಮಾಡುವುದಿದ್ದರೆ ಘಟಿಕೋತ್ಸವ ಅರ್ಜಿ ಸಲ್ಲಿಸುವುದಕ್ಕಿಂತ ಪೂರ್ವದಲ್ಲಿ ಸರಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು (ಪರೀಕ್ಷಾಂಗ) ಕಾರ್ಯಲಯ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ದಾವಣಗೆರೆ ಅಥವಾ ಇ-ಮೇಲ್ dudsupport@uniclare.com convocation@davanagereuniversity.ac.in ಸಂದೇಶ ಕಳುಹಿಸಬಹುದು ಹಾಗೂ ಸಹಾಯವಾಣಿ ಸಂಖ್ಯೆ: 6363341215. 6363337901 ಹಾಗೂ 6363351762 ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.