Connect with us

Dvgsuddi Kannada | online news portal | Kannada news online

ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಚಿಲ್ಲರೆ ಮಾರುಕಟ್ಟೆ ನಿರ್ವಹಣೆ  ಪದವಿ ಕೋರ್ಸ್ ಆರಂಭ

Davangere University dvgsuddi

ಪ್ರಮುಖ ಸುದ್ದಿ

ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಚಿಲ್ಲರೆ ಮಾರುಕಟ್ಟೆ ನಿರ್ವಹಣೆ  ಪದವಿ ಕೋರ್ಸ್ ಆರಂಭ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎನ್.ಎಸ್.ಕ್ಯೂ ಯೋಜನೆ (ರಾಷ್ಟ್ರಿಯ ಕೌಶಲ್ಯ ಯೋಜನೆ) ಅಡಿಯಲ್ಲಿ ಬಿ.ವೋಕ್ ಇನ್ ರಿಟೇಲ್ ಮ್ಯಾನೇಜ್‍ಮೆಂಟ್ ಅಂಡ್ ಇನ್‍ಫಾರ್ ಮೇಷನ್ ಟೆಕ್ನಾಲಜಿ (ಚಿಲ್ಲರೆ ಮಾರುಕಟ್ಟೆ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ) ಪದವಿ ಕೋರ್ಸ್‍ನ್ನು ಪ್ರಾರಂಭಿಸಿದ್ದು, ಪ್ರಸ್ತುತ ವಿಶ್ವವಿದ್ಯಾನಿಲಯದ ಎಂ.ಬಿ.ಎ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪಠ್ಯಕ್ರಮದ ಅನುಗುಣವಾಗಿ ವಿಷಯವಾರು ಪಠ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಈ ಪದವಿಯು ಮೂರು ವರ್ಷದ ಅವಧಿಯಾಗಿದ್ದು ವಿದ್ಯಾರ್ಥಿಯು ಮೊದಲನೇ ಸೆಮಿಸ್ಟರ್ ನಂತರ ಕೋರ್ಸ್‍ಯಿಂದ ಹೊರಬರಲು ಇಚ್ಚೆ ಪಟ್ಟರೆ ಪ್ರಮಾಣಪತ್ರ ನೀಡಲಾಗುವುದು. ಎರಡನೇ ಸೆಮಿಸ್ಟರ್ ನಂತರ ಹೊರಬರಲು ಇಚ್ಚೆ ಪಟ್ಟರೆ ಡಿಪ್ಲೋಮಾ ಪ್ರಮಾಣ ಪತ್ರ ನೀಡಲಾಗುವುದು. ನಾಲ್ಕನೇ ಸೆಮಿಸ್ಟರ್ ಮತ್ತು ಎರಡು ವರ್ಷಗಳ ನಂತರ ಅಡ್ವಾನ್ಸಡ್ ಡಿಪ್ಲೋಮಾ ಪ್ರಮಾಣ ಪತ್ರ ನೀಡಲಾಗುವುದು. ವಿದ್ಯಾರ್ಥಿಯು ಸಂಪೂರ್ಣವಾಗಿ ಆರು ಸೆಮಿಸ್ಟರ್ ಉತ್ತೀರ್ಣರಾದ ನಂತರ ಬಿ.ವೋಕ್ ಪದವಿ ಕೋರ್ಸನ್ನು ನೀಡಲಾಗುವುದು.

ವಿಶೇಷವಾಗಿ ಈ ಪದವಿಯು ಮುಂಬರುವ ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಔದ್ಯೋಗಿಕ ಅವಕಾಶಗಳು ಸೇರಿದಂತೆ ಇತರೆ ಉದ್ಯೋಗವಕಾಶಗಳು ವಿಫುಲವಾಗಿ ದೊರೆಯಲಿದ್ದು, ಈ ಉದ್ಯೋಗಿಗಳಿಗೆ ಅವಶ್ಯವಾಗಿರುವ ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಷಯಗಳನ್ನು ಹಾಗು ಪಠ್ಯಕ್ರಮವನ್ನು ಯು.ಜಿ.ಸಿಯ ಎನ್.ಎಸ್.ಕ್ಯೂ.ಎಫ್ ಯಂತೆ ಮಾದರಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ.

ಈಗಾಗಲೇ ಎರಡು ಸೆಮಿಸ್ಟರ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಚಿಲ್ಲರೆ ಮಾರುಕಟ್ಟೆಯ ರಿಲಯನ್ಸ್, ಬಿಗ್ ಬಜಾರ್ ಮುಂತಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿರುತ್ತಾರೆ. ಮುಂಬರುವ ದಿನಗಳಲ್ಲಿ ಈ ಉದ್ಯಮವು ಅತ್ಯಂತ ತ್ವರಿತಗತಿಯಲ್ಲಿ ಪ್ರಗತಿ ಹೊಂದುವ ಎಲ್ಲ ನಿರೀಕ್ಷೆಗಳಿವೆ. ಮಾಹಿತಿ ತಂತ್ರಜ್ಞಾನ ಪಠ್ಯಕ್ರಮ ಅಳವಡಿಸಿರುವುದರಿಂದ ಮಾರುಕಟ್ಟೆಗೆ ಸಂಬಂಧಪಟ್ಟ ತಂತ್ರಜ್ಞಾನದ ಸಂಸ್ಥೆಗಳ ಉದ್ಯೋಗ ಪಡೆಯುವ ಅವಕಾಶವಿರುತ್ತದೆ.

ಪ್ರತಿ ಸೆಮಿಸ್ಟರ್‍ನಲ್ಲೂ ವಿದ್ಯಾರ್ಥಿಯು ಯಾವುದಾದರೊಂದು ಪ್ರಮುಖ ಚಿಲ್ಲರೆ ಮಾರುಕಟ್ಟೆಯ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ ಮಾಡುವ ನಿಯಮವು ಕಡ್ಡಾಯವಾಗಿ ಅಳವಡಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಉತ್ಸಾಹ ಹಾಗೂ ವಿಶೇಷ ಅನುಭವವನ್ನು ನೀಡುತ್ತದೆ ಮತ್ತು ಉದ್ಯಮದ ಅಧಿಕಾರಿಗಳೊಂದಿಗೆ ಸಂಪರ್ಕಿಸುವ ಸದಾವಕಾಶವಿರುತ್ತದೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 40 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು ಎರಡು ಸೆಮಿಸ್ಟರ್‍ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಿಭಾಗದಲ್ಲಿ ನುರಿತ ಪ್ರಾಧ್ಯಾಪಕರಿದ್ದು ಪದವಿಗೆ ಅವಶ್ಯಕತೆ ಇರುವ ಐ.ಸಿ.ಟಿ ಭೋಧನಾ ಕೊಠಡಿಗಳು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಹಾಗು ವಿಶಾಲವಾದ ಸಭಾಂಗಣವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳಿಗೆ ಉದ್ಯೋಗದ ಮಾಹಿತಿ ನೀಡಲು ಉದ್ಯೋಗಾಧಿಕಾರಿಯನ್ನು ನೇಮಕ ಮಾಡಲಾಗಿರುತ್ತದೆ. ಈ ಪದವಿಯು ಯು.ಜಿ.ಸಿ ನಿಯಮಾವಳಿಯಂತೆ ಇತರೆ ಪದವಿಗಳಿಗೆ ತತ್ಸಮಾನವಾಗಿರುತ್ತದೆ. ಈ ಕೋರ್ಸ್ ಕುರಿತಾದ ಹೆಚ್ಚಿನ ಮಾಹಿತಿ ಹಾಗು ಪ್ರವೇಶಾತಿಗಾಗಿ ವಿಭಾಗದ ಅಧ್ಯಕ್ಷರು ಅಥವಾ ಬಿ.ವೋಕ್ ಸಂಯೋಜನಾಧಿಕಾರಿಗಳಾದ ರಮೇಶ್ ಚಂದ್ರಹಾಸ ಮೊ.ನಂ: 7829454531 ಇವರನ್ನು ಸಂಪರ್ಕಿಸಬಹುದು.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top