ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಬಿ.ಎ, ಎಂ.ಸಿ.ಎ ಕೋರ್ಸ್‍ಗಳಲ್ಲಿ ಖಾಲಿ ಉಳಿದ ಸೀಟುಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಡಿ.24 ರೊಳಗೆ ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.davangereuniversity.ac.in ಮೂಲಕ ಡೌನ್‍ಲೋಡ್ ಮಾಡಿಕೊಂಡು ಆಫ್‍ಲೈನ್ ಮೂಲಕ ಕಚೇರಿಗೆ ಸಲ್ಲಿಸಬೇಕು.
ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳು, ಖಾತೆ ಸಂ:40619101261( IFSC ಕೋಡ್ SBIN0040869 ) ಸಂದಾಯವಾಗುವಂತೆ ಪಾವತಿಸಬೇಕು. ಅಥವಾ ಹಣಕಾಸು ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ ಇವರ ಹೆಸರಿನಲ್ಲಿ ಡಿ.ಡಿ. ಮೂಲಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿ.ವಿ.ವೆಬ್‍ಸೈಟ್ ವೀಕ್ಷಿಸಲು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.



