ಹರಿಹರ: ಹರಿಹರ ರೈಲು ನಿಲ್ದಾಣ ಬಳಿ ಚಲಿಸುತ್ತಿದ್ದ ರೈಲು(Train) ಗಾಡಿಗೆ ಸಿಲುಕಿ ವೃದ್ಧೆಯೊಬ್ಬರು ಮೃ*ತಪಟ್ಟ ಘಟನೆ ನಡೆದಿದೆ.
ವೃದ್ಧ ಮಹಿಳೆ ಮೇ 7 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಹರಿಹರ ರೈಲ್ವೆ ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮಹಿಳೆ ಗುರುತು ಪತ್ತೆಯಾಗಿಲ್ಲ. ಎಡಗೈನಲ್ಲಿ ಗೌರಮ್ಮ ಎಂಬ ಹೆಸರು ಹಾಗೂ ಬಲಗೈಯಲ್ಲಿ ನಕ್ಷತ್ರದ ಹಚ್ಚೆ ಗುರುತುಗಳಿವೆ. ವೃದ್ದ ಮಹಿಳೆಯ ಬಗ್ಗೆ ಮಾಹಿತಿ ಗೊತ್ತಿದ್ದವರು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ. 9480802123, 9480800469 ಈ ನಂಬರ್ ಗೆ ಸಂಪರ್ಕಿಸಿ.



