Connect with us

Dvgsuddi Kannada | online news portal | Kannada news online

ದಾವಣಗೆರೆ: ವಾಹನ ಸವಾರರೇ ಎಚ್ಚರ: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ರೆ ಸಿಸಿಟಿವಿ ಕ್ಯಾಮೆರಾ ಮೂಲಕ ಕೇಸ್; ಒಂದೇ ಗಂಟೆಯಲ್ಲಿ 10 ಸಾವಿರ ದಂಡ

ದಾವಣಗೆರೆ

ದಾವಣಗೆರೆ: ವಾಹನ ಸವಾರರೇ ಎಚ್ಚರ: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ರೆ ಸಿಸಿಟಿವಿ ಕ್ಯಾಮೆರಾ ಮೂಲಕ ಕೇಸ್; ಒಂದೇ ಗಂಟೆಯಲ್ಲಿ 10 ಸಾವಿರ ದಂಡ

ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದು, ನಗರದಲ್ಲಿ ಸುಸಜ್ಜಿತವಾದ ರಸ್ತೆಗಳ ನಿರ್ಮಾಣವಾಗಿದೆ. ಸಂಚಾರಿ ನಿಯಮಗಳ (traffic rules) ಪಾಲನೆಗಾಗಿ ಸಿಗ್ನಲ್ (signal) ಅಳವಡಿಕೆ ಮಾಡಿದ್ದರೂ ನಿಯಮ ಉಲ್ಲಂಘನೆ (Violation of rule) ಮಾಡಿ ಸಂಚರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಪಾಲನೆ ಮಾಡದ ಸವಾರರಿಗೆ ದಂಡ (fine) ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.

ದಾವಣಗೆರೆ ನಗರದ ಶಾಮನೂರು ರಿಂಗ್ ರಸ್ತೆಯಲ್ಲಿನ ಶಾರದಾಂಬ ದೇವಸ್ಥಾನ ಬಳಿಯ ಹಾಗೂ ರವೀಂದ್ರನಾಥ ವೃತ್ತ ಸೇರಿದಂತೆ ಇನ್ನಿತರೆ ವೃತ್ತಗಳಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಯಲ್ಲಿ ಸಿಗ್ನಲ್ ಜಂಪ್ (Signal jump) ಮಾಡಿ ಸಂಚರಿಸಿದ ಸವಾರರಿಗೆ ಒಂದೇ ಗಂಟೆಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ದಂಡ ಹಾಕಲಾಗಿದೆ.

 

ದಾವಣಗೆರೆ: ಶಾಲಾ‌ ವಾಹನಗಳಿಗೆ ಜಿಪಿಎಸ್, ಸಿಸಿ ಕ್ಯಾಮೆರಾ ಕಡ್ಡಾಯ; ಜಿಲ್ಲಾಧಿಕಾರಿ ಸೂಚನೆ

ಕೆಲವು ದ್ವಿಚಕ್ರ ವಾಹನ ಸವಾರರು ವಿಮುಖವಾಗಿ ಸಂಚರಿಸುವುದು ಕಂಡು ಬರುತ್ತಿದ್ದರೆ, ಕೆಲವು ವಾಹನ ಸವಾರರು ಹೆಲ್ಮೆಟ್ (Helmet) ಧರಿಸದೇ ವಾಹನ ಚಲಾಯಿಸುವುದನ್ನು ಗಮನಿಸಲಾಗಿದೆ. ಮತ್ತು ಯಾವುದೇ ಸೂಚನೆಯನ್ನು ನೀಡದೇ ಮತ್ತು ಹಿಂದಿನ ವಾಹನಗಳನ್ನು ಗಮನಿಸದೇ ತಿರುವು ಪಡೆಯುವುದು ಸಹ ಅಪಘಾತಕ್ಕೆ (accident) ಕಾರಣವಾಗಿದ್ದು ಅಪಘಾತಗಳನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಟಾನ ಮಾಡಲಾಗುತ್ತಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರು ಸೇರಿದಂತೆ ವೃತ್ತಗಳಲ್ಲಿ ಸಿಗ್ನಲ್ ಜಂಪ್ ಮಾಡಿ ಸಂಚರಿಸಿದಲ್ಲಿ ದಂಡ ಕಟ್ಟಿಟ್ಟಬುತ್ತಿಯಾಗಿದೆ.

ಸ್ಮಾರ್ಟ್‍ಸಿಟಿ ಕಮಾಂಡ್ ಸೆಂಟರ್‍ ನಲ್ಲಿ ಸೆರೆ; ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ಯಾವುದೇ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಅದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ(CCTV camera) ಸೆರೆಯಾಗಿರುತ್ತದೆ. ನಗರದಲ್ಲಿ 525 ಕ್ಕೂ ಹೆಚ್ಚು  high resolution ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಸಂಪೂರ್ಣ ಡಾಟಾವನ್ನು ಸಂರಕ್ಷಣೆ ಮಾಡಲಾಗುತ್ತದೆ. ಯಾವುದೇ ವೃತ್ತ, ರಸ್ತೆಯಲ್ಲಿ ಸಂಚಾರಿ ನಿಯಮಗಳು ಉಲ್ಲಂಘನೆಯಾದರೂ ಸೆರೆಯಾಗುತ್ತದೆ ಎಂದರು.

ಸಂಚಾರಿ ನಿಯಮ ಜಾಗೃತಿ; ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 300 ಕ್ಕಿಂತ ಹೆಚ್ಚು ಜನರು ಅಪಘಾತ ಪ್ರಕರಣಗಳಲ್ಲಿ ಅಸುನೀಗಿದ್ದು ಇದು ಈ ವರ್ಷ ತಗ್ಗಿದೆ. ಅಪಘಾತ ಪ್ರಕರಣಗಳನ್ನು ಎರಡಂಕಿಗೆ ಇಳಿಸುವ ಉದ್ದೇಶದಿಂದ ಸಂಚಾರಿ ನಿಯಮಗಳ ಪಾಲನೆಯನ್ನು ಕಠಿಣಗೊಳಿಸಲಾಗುತ್ತಿದೆ. ಈಗಾಗಲೇ ಆಟೋ ಚಾಲಕರು, ಖಾಸಗಿ ಶಾಲಾ ಬಸ್ ಚಾಲಕರು, ಕೆಎಸ್‍ಆರ್‍ಟಿಸಿ ಬಸ್ ಚಾಲಕರ ಸಭೆ ಮಾಡಿ ಅರಿವು ಮೂಡಿಸಲಾಗಿದೆ. ನಗರದಲ್ಲಿ ವಿವಿಧ ಆಟೋ ಸಂಘಗಳೊಂದಿಗೂ ಮತ್ತು ಗೂಡ್ಸ್ ಆಟೋ, ಲಾರಿ ಮಾಲೀಕರ ಸಂಘಗಳೊಂದಿಗೂ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top