ದಾವಣಗೆರೆ: ದಾವಣಗೆರೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ತಪಾಸಣೆ ಚುರುಕು ಪಡೆದಿದ್ದು, ಎಲ್ಲ ಕಡೆ ಸಂಚಾರಿ ಪೊಲೀಸರು ಅಲರ್ಟ್ ಆಗಿದ್ದಾರೆ. ನಿನ್ನೆಯಷ್ಟೇ ಎಸ್ ಪಿ ರಿಷ್ಯಂತ್ ಅವರು ಇನ್ಮುಂದೆ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ಮನೆ ಬಾಗಿಲಿಗೆ ದಂಡದ ನೋಟಿಸ್ ಬರಲಿದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಫೀಲ್ಡಿಗಿಳಿದ ಸಂಚಾರಿ ಪೊಲೀಸರು ಎಲ್ಲ ಕಡೆ ಅಲರ್ಟ್ ಆಗಿದ್ದು, ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕರಿಗೆ ದಂಡ ವಿಧಿಸುತ್ತಿದ್ದಾರೆ.
ನಗರ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮೃದ್ವಜ ಅವರ ಮಾರ್ಗದರ್ಶನದಲ್ಲಿ ಸಂಚಾರ ವೃತ್ತ ಸಿಪಿಐ ಅನಿಲ್ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಜಯ್ಯಪ್ಪ ನಾಯ್ಕ್ ನಗರದ ಪಿ.ಬಿ.ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ವಾಹನಗಳ ತಪಾಸಣೆ ಮಾಡಿದರು.
ಈ ವೆಳೆ ಕೆಎ 17 ಜೆ 2532 ಬೈಕ್‌ನ ತಪಾಸಣೆ ಮಾಡಿದಾಗ ಆ ಬೈಕ್ ಮೇಲೆ ವಿವಿಧ 8 ಸಂಚಾರ ನಿಯಮ ಉಲ್ಲಂಘನೆ ಎಫ್.ಟಿ.ವಿ.ಆರ್ ಪ್ರಕರಣ ದಾಖಲಿಸಿ, ಒಟ್ಟು 4೦೦೦ ರೂ ದಂಡ ವಿಧಿಸಿದ್ದಾರೆ. ಇದಲ್ಲದೆ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಮನ್ಸೂರ್ ಅಹ್ಮದ್ ಅವರು, ನಗರದ ಪಿ.ಬಿ.ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ವಾಹನಗಳ ತಪಾಸಣೆ ಮಾಡುತ್ತಿರುವಾಗ ಕೆಎ 51 ಹೆಚ್‌ಎಫ್ 0716 ಬೈಕ್‌ನ ವಾಹನ ತಪಾಸನೆ ಮಾಡಿದಾಗ ಸದರಿ ಬೈಕ್ ಮೇಲೆ ವಿವಿಧ 22 ಸಂಚಾರ ನಿಯಮ ಉಲ್ಲಂಘನೆ ಎಫ್.ಟಿ.ವಿ.ಆರ್ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣಗಳ ದಂಡದ ಮೊತ್ತ ಒಟ್ಟು 11,೦೦೦ ರೂ ಗಳಾಗಿದ್ದು, ನಂತರ ಸದರಿ ವಾಹನ & ವಾಹನ ಸವಾರರನ್ನು ಠಾಣೆಗೆ ಕರೆದೋಯ್ದು ಒಟ್ಟು ವಿವಿಧ 22 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸೇರಿದಂತೆ ಒಟ್ಟು 11 ಸಾವಿರ ದಂಡವನ್ನು ವಸೂಲಿ ಮಾಡಲಾಗಿರುತ್ತದೆ.
ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ಒಟ್ಟು 30 ಸಂಚಾರ ನಿಯಮ ಉಲ್ಲಂಘನೆ ಎಫ್.ಟಿ.ವಿ.ಆರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 15 ಸಾವಿರ ದಂಡ ವಿಧಿಸಲಾಗಿದೆ.