Connect with us

Dvgsuddi Kannada | online news portal | Kannada news online

ದಾವಣಗೆರೆ: ಆತ್ಮ ತೃಪ್ತಿಗೆ‌‌ ಸಾವಯವ ಪದ್ಧತಿಯಲ್ಲಿ ತಾರಸಿ ಕೃಷಿ ಮಾಡಿ: ಸ್ಮಾರ್ಟ್ ಎಂ.ಡಿ. ರವೀಂದ್ರ ಬಿ. ಮಲ್ಲಾಪುರ

IMG 20220629 WA0005

ದಾವಣಗೆರೆ

ದಾವಣಗೆರೆ: ಆತ್ಮ ತೃಪ್ತಿಗೆ‌‌ ಸಾವಯವ ಪದ್ಧತಿಯಲ್ಲಿ ತಾರಸಿ ಕೃಷಿ ಮಾಡಿ: ಸ್ಮಾರ್ಟ್ ಎಂ.ಡಿ. ರವೀಂದ್ರ ಬಿ. ಮಲ್ಲಾಪುರ

ದಾವಣಗೆರೆ: ತಾರಸಿ ತೋಟದಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿ ತರಕಾರಿಗಳನ್ನು ಬೆಳೆದು ಸೇವಿಸಿದಾಗ ನಮಗೆ ಆತ್ಮತೃಪ್ತಿ ದೊರಕುತ್ತದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ. ಮಲ್ಲಾಪುರ ಹೇಳಿದರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ತಾರಸಿ ತೋಟ ಮತ್ತು ಕೈತೋಟ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನತೆ ಪರಿಸರ ಸಂರಕ್ಷಣೆಗೆ ಜೊತೆಗೆ ಉತ್ತಮ ಆಹಾರ ಅಭ್ಯಾಸವನ್ನು ಅನುಸರಿಸಬೇಕು. ಇದರಿಂದ ಜನರ ಆರೋಗ್ಯ ಸುಧಾರಣೆಯಾಗುವುದಲ್ಲದೆ ಸ್ವಚ್ಛ ಸಮಾಜವನ್ನು ನಿರ್ಮಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ತೋಟಗಾರಿಕಾ ತಜ್ಞರಾದ ಶ್ರೀ ಬಸವನಗೌಡ ಎಂ.ಜಿ. ರವರು ಪ್ರಸ್ತುತ ದಾವಣಗೆರೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ‌2,500 ಕ್ಕೂ ಹೆಚ್ಚು ಕುಟುಂಬಗಳಿಗೆ ತರಬೇತಿಯನ್ನು ನೀಡಿದ್ದು ಇದರಲ್ಲಿ ಶೇ. 35 ರಷ್ಟು ಕುಟುಂಬಗಳು ಇಂದಿಗೂ ಸಾವಯವ ತರಕಾರಿಗಳನ್ನು ಬೆಳೆಯುತ್ತಿರುವುದು ಶ್ಲಾಘನೀಯ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಮುಂದಿನ ಪೀಳಿಗೆಗೆ ಆಹಾರದ ಮಹತ್ವವನ್ನು ತಿಳಿಸಿ ಕೊಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಉತ್ತಮ ಆಹಾರದಿಂದ ಉತ್ತಮ ಮನಸ್ಸು ಮತ್ತು ಒಳ್ಳೆಯ ಮಾನಸಿಕ ಸಮತೋಲನವಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಧ್ಯಕ್ಷತೆವಹಿಸಿ ಮಾತನಾಡಿದ ಕೇಂದ್ರದ ಮುಖ್ಯಸ್ಥüರಾದ ಡಾ. ದೇವರಾಜ ಟಿ.ಎನ್., ಊಟ ಬಲ್ಲವರಿಗೆ ರೋಗವಿಲ್ಲ ಎಂಬ ಗಾದೆÉಯಂತೆ, ಆಹಾರದ ವಿಷಯದಲ್ಲಿ ಕುಟುಂಬದ ಸದಸ್ಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ತಿಳಿಸಿದರು.

ಕೈತೋಟದಿಂದ ಪರಿಸರ ಸ್ವಚ್ಚವಾಗಿರುವುದಲ್ಲದೆ, ನಗರ ಪ್ರದೇಶದಲ್ಲಿ ಮನೆ ಮನೆಗಳಲ್ಲಿನ ಬಾಂಧವ್ಯವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಮಕ್ಕಳನ್ನು ಕೈತೋಟದ ಕೆಲಸದಲ್ಲಿ ಬಳಸಿಕೊಂಡರೆ ಅವರಿಗೆ ಪ್ರಾಯೋಗಿಕ ನೈತಿಕ ಶಿಕ್ಷಣವನ್ನು ನೀಡಲು ಸಹಕಾರಿ ಎಂದು ತಿಳಿಸಿದರು. ನಗರದ ಕೃಷಿ ವಿಜ್ಞಾನ ಕೇಂದ್ರದ ಆವರಣವನ್ನು ಗೌರವಿಸಿ, ಕಾಪಾಡಿಕೊಳ್ಳಲು ಮಹಿಳಾ ನಾಗರೀಕರಲ್ಲಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಜೇನುಗೊಡು ಮಹಿಳಾ ಸಮಾಜ, ಪರಿಪೂರ್ಣ ಮಹಿಳಾ ಸಂಘ, ಶುಭಲಕ್ಷಿö್ಮ ಮಹಿಳಾ ಸಂಘದ ಪದಾಧಿಕಾರಿಗಳು, ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರ ಸತೀಶ್ ಎಂ.,  ಮಂಜುನಾಥ್, ಶ ಪ್ರದೀಪ್, ಕೇಂದ್ರದ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್, ಡಾ. ಅವಿನಾಶ್,  ರಘುರಾಜ ಜೆ., ಡಾ. ಜಯದೇವಪ್ಪ ಜಿ.ಕೆ. ಹಾಗೂ  ಸಣ್ಣಗೌಡರ್ ಹೆಚ್.ಎಂ. ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top