ದಾವಣಗೆರೆ: ಉತ್ತಮ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಭಾಜನರಾಗಿದ್ದಾರೆ.
ಬಿ.ಎನ್. ಗಿರೀಶ್ ಅವರು ಶಿವಮೊಗ್ಗದಲ್ಲಿ ತಹಶೀಲ್ದರ್ ಆಗಿದ್ದ ವೇಳೆ ಮಾರುವೇಷದಲ್ಲಿ ಅಕ್ರಮ ಕಲ್ಲು ಕ್ವಾರಿಗಳ ಮೇಲೆ ದಾಳಿ ನಡೆಸಿದ್ದರು. ಇದರಿಂದ ಗಣಿ ಕ್ವಾರಿಗಳು ಮುಚ್ಚಿದ್ದವು. ಇದರ ಜೊತೆಗೆ 6 ತಿಂಗಳಲ್ಲಿ 70 ಸಾವಿರ ಕಡತಗಳನ್ನು ವಿಲೇವಾರಿ ಮಾಡಿದ ಗೌರವ ಅವರಿಗೆ ಸಲ್ಲುತ್ತದೆ.
ಶಿವಮೊಗ್ಗ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಮನೆಗಳಿಗೆ ಹಾನಿಯಾದಾಗ ಹೆಚ್ಚಿನ ಪರಿಹಾರ ಕೊಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರು. ಹೀಗಾಗಿ ಬಿ.ಎನ್. ಗಿರೀಶ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ತಲಾ 25 ಸಾವಿರ ಪ್ರೋತ್ಸಾಹ ಧನ, ಪ್ರಶಸ್ತಿ ಪ್ರಮಾಣ ಪತ್ರ ಹೊಂದಿದೆ.



