ದಾವಣಗೆರೆ: ಟಿಕೆಟ್ ವಂಚಿತರ ಪಕ್ಷಾಂತರ ಪರ್ವ ಮುಂದುವರೆದಿದ್ದು, ಮಾಜಿ ಸಿಎಂ ದಿ. ಜೆ ಹೆಚ್ ಪಟೇಲ್ ಸಹೋದರನ ಪುತ್ರ ರೈತ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ತೇಜಸ್ವಿ ಪಟೇಲ್ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದಾರೆ.
ತೇಜಸ್ವಿ ಪಟೇಲ್ ಅವರು ಹರಿಹರದ ಜೆಡಿಎಸ್ ಅಭ್ಯರ್ಥಿ ಹೆಚ್ ಎಸ್ ಶಿವಶಂಕರ್ ನಿವಾಸದಲ್ಲಿ ಜೆಡಿಎಎಸ್ಗೆ ಸೇರ್ಪಡೆಯಾಗಿದ್ದಾರೆ. ತೇಜಸ್ವಿ ಪಟೇಲ್ ಜೆಡಿಎಸ್ ಸೇರ್ಪಡೆ ಹಿನ್ನೆಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ಮಾಯಕೊಂಡದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂದಪ್ಪ ಜೆಡಿಎಸ್ ಅಭ್ಯರ್ಥಿಗಳಾಗಿಯಾಗಿದ್ದಾರೆ. ಚನ್ನಗಿರಿಯಲ್ಲಿ ತೇಜಸ್ವಿ ಪಟೇಲ್ ಸೇರ್ಪಡೆ ಬಳಿಕ ಚನ್ನಗಿರಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ತೇಜಸ್ವಿ ಪಟೇಲ್ ಚನ್ನಗಿರಿ ಹಾಗು ಮಾಯಕೊಂಡ ಮತ ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿರುವ ಜೆ ಹೆಚ್ ಪಟೇಲ್ ಕುಟುಂಬದ ನಡೆಯಿಂದ ಕಾಂಗ್ರೆಸ್ ಹಿನ್ನಡೆ ಆಗಲಿದೆ.ಕಾಂಗ್ರೆಸ್ನಿಂದ ಚನ್ನಗಿರಿಯಲ್ಲಿ ಶಿವಗಂಗಾ ಬಸವರಾಜ್ ಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಪಟೇಲ್ ಪಕ್ಷ ತೊರೆದಿದ್ದಾರೆ.