ದಾವಣಗೆರೆ: ಪೊಲೀಸ್ ಪಬ್ಲಿಕ್ ಶಾಲೆಯಲ್ಲಿನ ಚಿಣ್ಣರ ಅಂಗಳ ಶಾಲೆಗೆ ಶಿಕ್ಷಕರ ಹುದ್ದೆಗೆ ಮೇ.18 ರಂದು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಚೇರಿಯಲ್ಲಿ ನೇರ ಸಂದರ್ಶ ಆಯೋಜಿಸಲಾಗಿದೆ.
ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಪೊಲೀಸ್ ವಸತಿಗೃಹಗಳ ಆವರಣದಲ್ಲಿ ನೂತನವಾಗಿ ಆರಂಭವಾಗಲಿರುವ ಪೊಲೀಸ್ ಪಬ್ಲಿಕ್ ಶಾಲೆಯ “ಪೊಲೀಸ್ ಚಿಣ್ಣರ ಅಂಗಳ” (Pre-KG, LKG, UKG ತರಗತಿಗಳಿಗೆ) ಪೂರ್ವ ಪ್ರಾಥಮಿಕ ಶಾಲೆಗೆ ನುರಿತ, ವಿಶೇಷ ಕೌಶಲ್ಯವುಳ್ಳ, ತರಬೇತಿ ಹೊಂದಿದ ಶಿಕ್ಷಕರ ನೇಮಕಕ್ಕೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಅರ್ಜಿದಾರರು ಎನ್‍ಟಿಟಿ, ಮೌಂಟೆಸ್ಸರಿ ತರಬೇತಿಯೊಂದಿಗೆ ಎರಡು ವರ್ಷದ ಅನುಭವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿಮೊ.ಸಂ:9743936234,7899049373, 8971713916 ನ್ನು ಸಂಪರ್ಕಿಸಲು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಅರ್ಹತೆ:01) ಯಾವುದೇ ಪದವಿಯೊಂದಿಗೆ NTT/Montessori Training ಪಡೆದಿರಬೇಕು
02) ಎರಡು ವರ್ಷ ಅನುಭವ ಹೊಂದಿರಬೇಕು
03) ಮಕ್ಕಳ ಸ್ನೇಹಿ ಕೌಶಲ್ಯತೆಯೊಂದಿರಬೇಕು
ಆರ್ಹ ಆಸಕ್ತರು ನೇರ ಸಂದರ್ಶನಕ್ಕೆ ದಿನಾಂಕ 18-05-2024 ರಂದು ಬೆಳಗ್ಗೆ 9-00 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಛೇರಿ, ಪಿಜೆ ಬಡಾವಣೆ, ದಾವಣಗೆರೆ ಆಗಮಿಸಬೇಕು.



