ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ದಾವಣಗೆರೆಯ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ(ರಿ) ವಿನೋಬ ನಗರದ ಅನುದಾನಿತ ಶ್ರೀ ಜಗದ್ಗುರು ಜಯದೇವ ಮುರುಘಾರಾಜೇಂದ್ರ ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಹುದ್ದೆ ವಿವರ
- ಆಂಗ್ಲಭಾಷೆ ಸಹ ಶಿಕ್ಷಕ, ವಿದ್ಯಾರ್ಹತೆ : ಬಿಎ, ಬಿಇಡಿ, ಮೀಸಲಾತಿ: ಸಾಮಾನ್ಯ
- ಕನ್ನಡ ಭಾಷಾ ಸಹ ಶಿಕ್ಷಕ, ವಿದ್ಯಾರ್ಹತೆ: ಬಿಎ, ಬಿಇಡಿ, ಮೀಸಲಾತಿ: ಪರಿಶಿಷ್ಟ ಜಾತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯ ಒಂದು ಪ್ರತಿಯನ್ನು ಸಾರ್ವಜನಿಕ ಇಲಾಖೆ ಉಪ ನಿರ್ದೇಶಕರಿಗೆ ಇನ್ನೊಂದು ಪ್ರತಿಯನ್ನು ದಾವಣಗೆರೆಯ ಶ್ರೀಜಗದ್ಗುರು ಜಯವಿಭವ ವಿದ್ಯಾಸಂಸ್ಥೆ (ರಿ) , ನರಸರಾಜ ರಸ್ತೆ, ದಾವಣಗೆರೆ 577001(ಅಕ್ಕಮಹಾದೇವಿ ಬಾಲಿಕ ಪ್ರೌಢಶಾಲೆ ) ಸಲ್ಲಿಸಬೇಕು. ಅರ್ಜಿ ಜತೆ ವಿದ್ಯಾಹರ್ತೆಯ ಎಲ್ಲಾ ಮೂಲ ದಾಖಲಾತಿಗಳ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳೊಂದೊಗೆ ಪ.ಜಾ ಅವರು ರೂ.500 ಮತ್ತು ಸಾಮಾನ್ಯ 1000 ರೂ.ಗಳ ಬ್ಯಾಂಕ್ ಡಿಡಿಯನ್ನು SRI HAGADGURU JAYAVIBHAVA EDUCATIONAL SOCIETY(R) DAVANAGERE ಹೆಸರಲ್ಲಿ ತೆಗೆಸಬೇಕು. ಅರ್ಜಿನ್ನು ರಿಜಿಸ್ಟರ್ ಅಂಚೆ ಮೂಲಕ ಪ್ರಕಟಣೆಯಾದ (ದಿ.28.03.2023) 21 ದಿನದೊಳಗೆ ಸಲ್ಲಿಸತಕ್ಕದ್ದು, ಅವಧಿ ಮುಗಿದ ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಸಂದರ್ಶನ ದಿನಾಂಕವನ್ನು ಮುಂದೆ ತಿಳಿಸಲಾಗುವುದು.